ಮತ್ತೆ ಬಂದಿದೆ ಸಂಬ್ರಮದ ‘ಯುಗಾದಿ’

–  ಕೆ.ಚರಣ್ ಕುಮಾರ್ (ಚಾಮರಾಜಪೇಟೆ).

ಮತ್ತೆ ಬಂದಿದೆ ಸಂಬ್ರಮದ ಯುಗಾದಿ
ಇಂದಲ್ಲವೇ ಹೊಸ ಯುಗದ ಹಾದಿ
ಹೊಸ ಉತ್ಸಾಹಕ್ಕೆ, ಹೊಸ ಶಕ್ತಿಗೆ ನಾಂದಿ
ಬಕ್ತಿಯ ಅಲೆಯಲ್ಲಿ ಮುಳಗೇಳುವರು ಮಂದಿ

ಹಳೆಯ ಕಹಿಯ ನೋವನೆಲ್ಲ ಮರೆತು
ಜೀವನದ ಕಹಿ ಸತ್ಯಗಳನ್ನ ಅರಿತು
ಎಲ್ಲಾ ಮನೆ -ಮನಗಳೊಂದಿಗೆ ಬೆರೆತು
ಚಿಂತಿಸಲಿ ಸದಾ ಪರರ ಏಳಿಗೆ ಕುರಿತು

ಮನೆ ಬಾಗಿಲಿಗೆ ಸುಂದರ ಹಸಿರುತೋರಣ
ಅಡುಗೆ ಮನೆಯಲ್ಲಿ ಗಮ ಗಮ ಒಬ್ಬಟ್ಟು ಹೂರಣ
ತಿನ್ನಲು ಶುಚಿ ರುಚಿಯಾದ ಮಾವಿನ ಚಿತ್ರಾನ್ನ
ಎಲ್ಲಕ್ಕೂ ಮೊದಲಾಗಿ ತಲೆಗೆ ಎಣ್ಣೆಯ ಮಜ್ಜನ
ಮರೆಯದೆ ಮಾಡಬೇಕು ದೇವರ ದ್ಯಾನ

ಬತ್ತಿದ ಕೆರೆ, ಕಟ್ಟೆ, ಬಾವಿ ತುಂಬಿ ಹರಿಯಲಿ
ಬೆವರು ಸುರಿವ ರೈತನ ಬೆಳೆಗೆ ಒಳ್ಳೆ ಬೆಲೆ ಸಿಗಲಿ
ಗಡಿ ಕಾಯುವ ಯೋದ ಚಿರಾಯುವಾಗಲಿ
ಕನ್ನಡದ ಪ್ರೀತಿ ಎಲ್ಲೆಡೆ, ಎಲ್ಲರಲ್ಲೂ ಹರಡಲಿ
ಆ ದೇವರ ಕ್ರುಪೆ ಸದಾ ಎಲ್ಲರ ಮೇಲಿರಲಿ

( ಚಿತ್ರ ಸೆಲೆ: welcome-the-new-year-with-ugadi )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: