ದೂರ ತೀರ ಎನ್ನ ಕರೆದು ತಂದಿತು ಇತ್ತ

 ಗೌಡಪ್ಪಗೌಡ ಪಾಟೀಲ್.

ಆ ದೂರ ತೀರ ಎನ್ನ
ಕರೆದು ತಂದಿತು ಇತ್ತ!
ಎಲ್ಲೋ ಹೋಗುತಿದ್ದ ನನ್ನ
ಸೆಳೆದು ಬಂದಿಸಿ ಚಿತ್ತ!!

ಅತ್ತ ಇತ್ತಲ ಮದ್ಯದಲಿ
ಬೆತ್ತಲಾದ ಮನಕೆ ನೆಮ್ಮದಿ ನೀಡಿ
ಸುತ್ತ ಕೊತ್ತಲ ಕಡಿದಿಲ್ಲಿ
ಕತ್ತಲಾದ ದಿನಕೆ ಕೊನೆಯ ಹಾಡಿ!!

ನೂರು ಕೊರಗ ಹೊತ್ತ
ಅಂತರಂಗಕೆ ಶುದ್ದಿಸಲು ಕರೆದು
ನೂರು ಹೊರಗ ಎತ್ತು
ತಂದು ತರಂಗದ ಸನಿಹಕೆ ಎಳೆದು

ದೂರಕೆಲ್ಲೋ ನೆಟ್ಟ ದಿಟ್ಟಿಗೆ
ಶಾಂತಸಾಗರ ಶ್ಯಾಮಲೆ ಕರಗಿಹಳು ಆಗಲೆ
ದರೆಯಲೆಲ್ಲೋ ಇಟ್ಟ ಕಿಚ್ಚಿಗೆ
ಅಂತರಂಗದಲಿ ಒಮ್ಮೆಲೆ ಹರಡಿಹಳು ಆಗಲೆ

ಹುಗಿದ ಬಾವಗಳ ಅಗೆದು
ತೆಗೆದು ನಾನೆಸೆದರೆ ಸಾಗರದೆಡೆ
ತಾಗಿದ ಆಳಗಳ ನೆಗೆದು
ಜಿಗಿದು ಅಲೆಗಳತೆರೆ ಬಾನಿನೆಡೆ?!!

ಇನಿತಿನಿತು ಅರಿತ ಸಾಗರ
ಎನ್ನ ಬಾವಕೆ ಬಾಗಿತು
ತನ್ನತಾನಾಗೆ ನುರಿತ ಜಲಾಗರ
ಒಮ್ಮೆ ಹಿಂದಕೆ ಸರಿಯಿತು!!!

ನಾಳೆಗೇನದು ಕಾದಿದೆಯೋ
ಸಮುದ್ರ ಮಂತನ ಕರೆದಿದೆಯೋ
ಇಂದಿನ ಪ್ರಶ್ನೆಗಳೊಳಗೆಲ್ಲವೂ
ನಾಳೆಯ ರಹಸ್ಯವಡಗಿದೆಯೋ??

ಎಲ್ಲವನರಸಿ ಮೋಹ ಲಂಗನ
ಮಾಡುವವರೆಗೂ ನನ್ನ ನಾನರಿವೆನೆ
ಇನ್ನೂವರೆಗಿನ ನೀರಸ ಜೀವನ
ಜೇನೊರೆಸೋವರೆಗೆ ಚಲವ ನಾತೊರೆಯೆನೆ…

(ಚಿತ್ರ ಸೆಲೆ: proudstories.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: