ನಿನ್ನ ಗುಂಗಲ್ಲಿ ನಾನು

– ಕವಿತ ಡಿ.ಕೆ(ಮೈಸೂರು).

ಗೆದ್ದು ಸೋಲುವ, ಸೋತು ಗೆಲ್ಲುವ,
ಜೀವನದ ಚದುರಂಗದಲಿ
ಸ್ಪೂರ‍್ತಿ, ಸಹನೆ, ಹೊಂದಾಣಿಕೆ
ಎಂಬ ಮಂತ್ರದಡಿಯಲ್ಲಿ
ಕಶ್ಟ ಸುಕ ಬಾದೆಗಳ ಸಮನಾಗಿ ಸ್ವೀಕರಿಸಿ ನಡೆಯೋಣವೆಂದರೆ…!

ನೆಮ್ಮದಿಯು ನನಗಿಲ್ಲ
ನಿನ್ನ ಚಿಂತೆಯೆಂದೂ ಬಿಡಲಿಲ್ಲ
ಏಕೋ ಪರಿತಪಿಸುತ್ತಿರುವೆ
ಪ್ರೀತಿ ಎಂಬ ಬಾವನೆಯ ನೀ ಅರಸು
ನಾನಾಗುವೆ ಪರಿಶುದ್ದತೆಯ ಪ್ರೇಮಿ
ಕೊಲೆ ಮಾಡಿ ಕೊಂದವ, ಸಿಗುವನು ಸಹಜವಾಗಿ
ಕನಸಲ್ಲಿ ಬಂದು ಕಾಡಿ ಕೊಂದು ಹೋದ ನಿನ್ನನು
ಹೇಗೆ ಹುಡುಕಲಿ… ?

ನಿನ್ನ ಗುಂಗಲ್ಲಿ ಮಲಗಿರುವ ನನಗೆ
ನಿದ್ದೆ ಹತ್ತುವುದೇ ಅಪರೂಪ
ಹಾಗಿರುವಾಗ ನೆನಪೆಂಬ ಬುತ್ತಿಯಿಟ್ಟು
ಪದೇ ಪದೇ ಕೊಲ್ಲಲು ಹೊರಟಿರುವೆಯಲ್ಲಾ
ನಾ ಏನು ಮಾಡಲಿ….?

( ಚಿತ್ರ ಸೆಲೆ: huffingtonpost.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: