ಅಂದಿತ್ತು ಒಂದು ಕಾಲ

– ಸುರಬಿ ಲತಾ.

ಅಂದಿತ್ತು ಒಂದು ಕಾಲ
ಬಡತನದಲ್ಲಿ ಸಂತಸವಿತ್ತು
ಕಣ್ಣಲ್ಲಿ ಕನಸುಗಳಿತ್ತು

ಇರಲಿಲ್ಲ ಬೇಸಿಗೆಯಲ್ಲಿ
ಪ್ಯಾನು, ಏಸಿ ಮನೆಯಲ್ಲಿ
ಮಲಗಲು ಮಾಳಿಗೆಯ ಮೇಲೆ
ಏನೋ ಆನಂದ ಮನದಲ್ಲಿ

ಬಿಸಿಲ ಬೇಗೆ ಗಂಟಲಲ್ಲಿ
ಮಡಿಕೆ ನೀರೆ ಸುಕವಲ್ಲಿ
ಒದ್ದೆ ಬಟ್ಟೆಯಲ್ಲಿ ಕಳೆದೆವು
ಇರಲಿಲ್ಲ ಜ್ವರದ ಬಯವು

ಸಂಜೆಯ ಊಟ
ಹಾಲು ಬೆಳದಿಂಗಳಲ್ಲಿ
ಅಮ್ಮನ ಕೈ ತುತ್ತೇ
ಅಮ್ರುತ ಜಗದಲ್ಲಿ

ಅಂದು ಸೌಲಬ್ಯಗಳಿರಲಿಲ್ಲ
ಚಿಂತೆಗಳು ಹತ್ತಿರ ಬರಲಿಲ್ಲ
ಇಂದೆಲ್ಲಾ ಬೇಕು, ಬೇಡಗಳಿವೆ
ಮನದಲ್ಲಿ ಅತ್ರುಪ್ತಿ ಮನೆಮಾಡಿದೆ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: