ಕವಿತೆ : ಕನಸಿನ ಗೋಪುರ

– ಪ್ರತಿಬಾ ಶ್ರೀನಿವಾಸ್.

ಕೇಳೆನ್ನ ದನಿಯ
ಕಾಯುತಿರುವೆ ಇನಿಯ

ಕಟ್ಟಿರುವೆ ನಾನೊಂದು
ಕನಸಿನ ಗೋಪುರವ
ನಮ್ಮಿಬ್ಬರ ಮನಸುಗಳೇ
ಅಡಿಪಾಯವಾಗಿಹುದು

ನಿನ್ನ ದುಡಿಮೆಯ ಬೆವರ ಹನಿಯು
ಮಣ್ಣಲ್ಲಿ ಸೇರಿ ಗೋಪುರ ಸಿದ್ದವಾಗಿದೆ
ನನ್ನೆಲ್ಲಾ ಆಸೆಗಳ ಬೆರಸಿ
ಗೋಪುರವ ಅಲಂಕರಿಸಿರುವೆ

ಕಟ್ಟಿದ ಗೋಪುರ ಗಟ್ಟಿಯಾಗಿರಲು
ಕನಸೆಲ್ಲಾ ನನಸಾಗಿ ಜೀವನ ನಡೆಸಲು
ಒಡೆಯದಿರಲಿ ಮನಸ್ಸೆಂಬ ಅಡಿಪಾಯವು…

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: