ಚೆಲುವೆ ನಿನಗೆ ಹೇಳಬೇಕು…

– ಶಾಂತ್ ಸಂಪಿಗೆ.

ಚೆಲುವೆ ನಿನಗೆ ಹೇಳಬೇಕು
ಒಂದು ಮದುರ ಮಾತಿದೆ
ಏಕೋ ಏನೋ ಹೇಳಲಾರೆ
ಮೂಕ ಮಾತು ಬಾರದೆ

ಬೀಸೋ ಗಾಳಿಯಲ್ಲು ಕೂಡ
ನಿನ್ನ ಮದುರ ಹಾಡಿದೆ
ನಿನ್ನ ಮರೆತ ಒಂದು ಗಳಿಗೆ
ಹ್ರುದಯ ಬಡಿತ ನಿಂತಿದೆ

ಎಲ್ಲಾ ಗೆಜ್ಜೆ ಸದ್ದಿನಲ್ಲು
ನಿನ್ನ ಹೆಜ್ಜೆ ಹುಡುಕುವೆ
ಉಸಿರಾಗಿ ಸೇರು ಬಳಿಗೆ
ಪಿಸುಮಾತು ಒಂದು ಹೇಳುವೆ

ಸಂಜೆ ಕೆಂಪು ಬಾನಿನಲ್ಲಿ
ನಿನ್ನ ನಗುವೆ ತುಂಬಿದೆ
ಬುವಿ ಬಾನು ಸ್ನೇಹದಂತೆ
ಜೊತೆಗೆ ಬಾಳೊ ಕನಸಿದೆ

ಎರಡು ಮನಸು ಬೆರೆಯಲು
ಕಣ್ಣ ನೋಟ ಸಾಕ್ಶಿಯೆ
ಎದೆಯೊಳಗೆ ಬೆಳೆದ ಕನಸು
ಒಲವೆಂಬುದೆ ಪ್ರೀತಿಯೆ

( ಚಿತ್ರ ಸೆಲೆ: moviewriternyu.files.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: