SUVಗಳ ದಿಕ್ಕು ಬದಲಿಸಲಿದೆಯೇ ಜೀಪ್ ಕಂಪಾಸ್?

– ಜಯತೀರ‍್ತ ನಾಡಗವ್ಡ.

ಜೀಪ್ ಎಂಬುದು ತುಂಬಾ ವರುಶಗಳಿಂದ ಬಾರತದ ತಾನೋಡಗಳ ಮಾರುಕಟ್ಟೆಯಲ್ಲಿರುವ ಹೆಸರು. ಜೀಪ್ ಅಂದರೆ ಹೆಚ್ಚಿನ ಬಾರತೀಯರಿಗೆ ದಿಟ್ಟ, ಗಡುಸಾದ ಬಂಡಿಯೊಂದರ ತಿಟ್ಟವೊಂದು ಕಣ್ಮುಂದೆ ಬರುವುದು ಸಹಜ. ಬಾರತ ಬ್ರಿಟಿಶರ ಆಳ್ವಿಕೆಯಿಂದ ಸ್ವತಂತ್ರವಾಗುವ ಮುಂಚೆ ಮಹೀಂದ್ರಾ ಕಂಪನಿ ಬಾರತದಲ್ಲಿ ಜೋಡಿಸಿ ಅಣಿಮಾಡುತ್ತಿದ್ದ ವಿಲ್ಲಿಸ್ ಜೀಪ್ ತಿಟ್ಟವೇ ಇದು. ಇಂದಿಗೂ ಬಾರತದ ಹಲವು ಹಳ್ಳಿಗಳಲ್ಲಿ ಸಾರಿಗೆಗೆ ಈ ಜೀಪ್ ಬಂಡಿಗಳನ್ನೇ ಅವಲಂಬಿಸಿದ್ದಾರೆ. ಜೀಪ್, ಜಗತ್ತಿನ ಎರಡನೇ ಕಾದಾಟದ ಹೊತ್ತಿನಲ್ಲಿ “ವಿಲ್ಲಿಸ್ ಜೀಪ್” ಎಂಬ ಅಮೇರಿಕೆಯ ಕೂಟವೊಂದು ತಯಾರಿಸುತ್ತಿದ್ದ ಬಂಡಿ. ಮಿಲಿಟರಿ ಸೈನಿಕರು ಕಡಿದಾದ, ಕಚ್ಚಾ ರಸ್ತೆಗಳಲ್ಲಿ ಸಾಗಲು ಈ ಹೊಸಬಗೆಯ ಬಂಡಿ ತಯಾರಿಸಲಾಗಿತ್ತು. 1987ರ ಹೊತ್ತಿಗೆ ವಿಲ್ಲಿಸ್ ಜೀಪ್ ಕೂಟವನ್ನು ಕ್ರೈಸ್ಲರ್ ಕೊಂಡುಕೊಂಡಿತು. ಅಲ್ಲಿಂದ ಜೀಪ್ ಬ್ರ್ಯಾಂಡ್ ಅನ್ನು ಹಾಗೇ ಉಳಿಸಿಕೊಂಡು, ಹೊಸ ತಲೆಮಾರಿನ ಜೀಪ್ ಬಿಡುಗಡೆ ಮಾಡುತ್ತಲೇ ಬಂದಿದೆ ಕ್ರೈಸ್ಲರ್. ಇದು ಜೀಪ್ ಬಂಡಿಯ ಹಳಮೆ.

ಒಡೆಯರು ಬದಲಾದರೂ ಜೀಪ್ ಬಂಡಿಗೆ ಬೇಡಿಕೆ ಮಾತ್ರ ಎಂದೂ ಕಡಿಮೆಯಾಗಿಲ್ಲ. ಕಳೆದ ಕೆಲ ವರುಶಗಳ ಹಿಂದೆ ಕ್ರೈಸ್ಲರ್ , ಪಿಯಟ್‌ನ ಪಾಲಾಗಿದ್ದು, ಇದೀಗ ಪಿಯಟ್‌ ಕ್ರೈಸ್ಲರ್ ಎಂದು ಕರೆಯಲ್ಪಡುತ್ತದೆ. ಮೊದಲು ಆಮದು ಮಾಡಿ ತರಿಸಿಕೊಳ್ಳಲಾಗುತ್ತಿದ್ದ ಜೀಪ್ ಬಂಡಿಗಳು ಇದೀಗ ಪಿಯಟ್ ಮೂಲಕ ಬಾರತದಲ್ಲೇ ಅಣಿಗೊಂಡು ನಮ್ಮ ಮಾರುಕಟ್ಟೆಗೆ ಕಾಲಿಟ್ಟಿವೆ. ತಿಂಗಳುಗಳಿಂದ ಸುದ್ದಿಯಲ್ಲಿದ್ದ ಜೀಪ್ ಕಂಪಾಸ್(Jeep Compass) ಇತ್ತೀಚಿಗಶ್ಟೇ ಮಾರುಕಟ್ಟೆಗೆ ಬಂದಿದೆ. ಜೀಪ್ ಕಂಪಾಸ್ ಯಾವ ವಿಶೇಶತೆಗಳಿಂದ ಕೂಡಿರಲಿದೆ? ಯಾವ ಬಂಡಿಗಳೊಂದಿಗೆ ಸೆಣಸಲಿದೆ? ಬೆಲೆ ಏನು? ಎಂಬೆಲ್ಲ ಕೇಳ್ವಿಗಳಿಗೆ ಮುಂದೆ ಓದಿ.

ಬಿಣಿಗೆ, ಸಾಗಣಿ(Engine and Transmission):

ಮೈಮಾಟ:

ಕ್ರ‍ೋಮ್‌ನಿಂದ ಸುತ್ತುವರಿದ 7 ಪಟ್ಟಿಯ ಮುನ್ಕಂಬಿ ತೆರೆ(Front Grill), ನುಣುಪಾದ ಬಿಣಿಗವಸು(Bonnet), ಅಚ್ಚುಕಟ್ಟಾದ ಹೆಗಲು ಮತ್ತು ಚಚ್ಚೌಕವಾದ ಗಾಲಿಯ ಕಮಾನುಗಳು(Wheel Archs), ಜೀಪ್ ಕಂಪಾಸ್‌ನ ಗಟ್ಟಿಮುಟ್ಟಾದ ಆಟೋಟದ ಬಳಕೆಯ ಬಂಡಿಯ ನೋಟವನ್ನು ಎತ್ತಿಹಿಡಿದಿವೆ. ಜೀಪ್‌ನವರದೇ ಆದ ಗ್ರ್ಯಾಂಡ್ ಶೆರೋಕಿಯನ್ನೇ(Grand Cherokee) ಹೆಚ್ಚಾಗಿ ಹೋಲುವ ಕಂಪಾಸ್, ಶೆರೋಕಿಯನ್ನೇ ಕಿರಿದಾಗಿಸಿದ ಮಾದರಿಯೆನ್ನಬಹುದು. ಶಾರ‍್ಕ್‌ನ ರೆಕ್ಕೆಯಂತೆ ತೋರುವ ಹಿಂಬಾಗದ D-ಪೆಟ್ಟಿಗೆ, ಬಳಕುವ ಸೂರು(Roof) ರೇಂಜ್ ರೋವರ್ ಎವೋಕ್ ಬಂಡಿಯ ಮಟ್ಟದಲ್ಲಿವೆ. ಚೊಕ್ಕವಾಗಿ ಜೋಡಿಸಿದ ಎಲ್‌ಇಡಿ ದೀಪಗಳು ಬಂಡಿಯ ನೋಟವನ್ನು ಇನ್ನೂ ಹೆಚ್ಚಿಸುತ್ತವೆ. 16 ಇಂಚುಗಳ ಗಾಲಿಗಳನ್ನು ಜೋಡಿಸಲಾಗಿದ್ದರೂ ಕೆಲವರು ಇದಕ್ಕಿಂತ ದೊಡ್ಡಗಿನ ಗಾಲಿ ಜೋಡಿಸಬೇಕಿತ್ತೆನೋ ಎನ್ನಬಹುದು. ಕಂಪಾಸ್ ಬಂಡಿಯ ಉದ್ದನೆಯ ಕ್ಯಾಬಿನ್ ಕೆಲವರಿಗೆ ಹಿಡಿಸದೇ ಇರಬಹುದು.

ಗಟ್ಟಿಮುಟ್ಟಾದ ಹೊರಮೈನಿಂದ ಕಂಗೊಳಿಸುವ ಕಂಪಾಸ್ ಬಂಡಿ, ಒಳಮೈ ಕೂಡ ಹಲವು ವಿಶೇಶತೆಗಳಿಂದ ಕೂಡಿದೆ. ನಿಮಗಿಶ್ಟದಂತೆ ಬದಲಾಯಿಸಿಕೊಳ್ಳಬಲ್ಲ 3.5 ಇಂಚುಗಳಶ್ಟು ದೊಡ್ಡದಾದ ತೋರುಮಣೆ(Dash board) ಗಮನ ಸೆಳೆಯುತ್ತದೆ. ಬಂಡಿಯ ತಿಗುರಿಗೆ(Steering wheel) ದಪ್ಪನೆಯ ತೊಗಲಿನ ಹೊದಿಕೆ ನೀಡಿದ್ದು ತಿಗುರಿಯ ಮೇಲೆ ಬಿಗಿಹಿಡಿತ(Grip) ಸಾದಿಸಿ ಸುಳುವಾಗಿ ಮುನ್ನುಗ್ಗಬಹುದು. ತಿಗುರಿಯ ಮೂಲಕವೇ ಪೋನ್ ಕರೆ ಮಾಡಲು, ಕರೆ ಮುಗಿಸುವ ಒತ್ತುಗುಂಡಿ ನೀಡಲಾಗಿದ್ದು, ಇದು ಎದ್ದು ಕಾಣುತ್ತದೆ. ಹಲ್ಲುಗಾಲಿ ಬದಲಿಸುವ ಬುಗುಟಕ್ಕೆ(Gear Shift Lever) ಜಲ್ಲಿಯ ಹೊದಿಕೆ(Metal Tip) ಬಲು ಅಂದವಾಗಿ ಕಾಣುತ್ತದೆ. ಮೆತ್ತನೆಯ ತೊಗಲಿನ ಕೂರಿರ‍್ಕೆ ಜವಳಿ(Seat Upholestry) ದೂರದ ಪಯಣಕ್ಕೆ ಹಿತಾನುಬವ ನೀಡಲಿವೆ.

  • ಕಂಪಾಸ್ ಬಂಡಿಯಲ್ಲಿ ಪಯಣಿಗರಿಗೆ ಜಾಗಕ್ಕೆ ಯಾವುದೇ ಕೊರತೆಯಿಲ್ಲ. ಹಾಯಾಗಿ ಕೈ, ಕಾಲು ಚಾಚಿ ಕುಳಿತುಕೊಳ್ಳಬಹುದು.
  • ಹೆಚ್ಚು ಹೊತ್ತು ಬಂಡಿಯಲ್ಲಿ ಕೂತಾಗ ತೊಡೆ ನೋವಾಗದಂತೆ ತೈ ಸಪೋರ‍್ಟ್(Thigh support) ಕೂಡ ಒದಗಿಸಲಾಗಿದೆ. ಹಿಂಬದಿಯ ಕೂರುಮಣೆಗಳಿಗೆ ತೋಳು ಊರುಕ(Arm Rest) ನೀಡಿದ್ದು ಅದರ ಬದಿಗೆ ಕಪ್ ಸೇರುವೆಗಳು(Cup holders) ಇವೆ.
  • ಹಿಂಬದಿಯ ಕೂರುಮಣೆಗಳ ನೇರವಾಗಿದ್ದು, ಕೊಂಚ ಹಿಂದೆ ಬಾಗುವಂತಿದ್ದರೆ ಚೆನ್ನಾಗಿರುತ್ತಿತ್ತು.
  • ಇದೇ ರೀತಿ ಬಂಡಿಯ ಮುಂಬದಿಯ ಬಾಗಿಲುಗಳಿಗೆ ಕಪ್/ಬಾಟಲ್ ಸೇರುವೆಗಳನ್ನು, ಸರಕು ಗೂಡುಗಳನ್ನು(Glove Box) ನೀಡಲಾಗಿದೆ.
  • ಸರಕು ಚಾಚು ಸಾಕಶ್ಟು ದೊಡ್ಡದಾಗಿದೆ, ಹೆಚ್ಚಿನ ಸರಕು ಸಾಗಿಸಲು ಯಾವುದೇ ತೊಂದರೆಯಿಲ್ಲ.
  • ಓಡಿಸುಗನ ಹಿಂಬಾಗದಲ್ಲಿ ಕೋಟು, ಅಂಗಿ ಸಿಕ್ಕಿಸಲು ಕೊಕ್ಕೆಗಳ ಏರ‍್ಪಾಟನ್ನು ಕೂಡ ಜೋಡಿಸಲಾಗಿದೆ.
  • ಹಿಂದು-ಮುಂದಿನ ಎಲ್ಲ ಬಾಗಿಲುಗಳಿಗೆ ಮಿನ್ಕಿಂಡಿಗಳಿವೆ(Power Window).
  • ಕಂಪಾಸ್ ಬಂಡಿಗೆ 7 ಇಂಚಿನ ತಿಳಿನೆಲೆ ಏರ‍್ಪಾಟಿನ ಸೋಕು ತೆರೆಯಿದೆ, 6 ಉಲಿಕಗಳುಳ್ಳ ಹಾಡುಗಾರಿಕೆ ಪೆಟ್ಟಿಗೆ(6-Speaker Music System) ಇಂಪನೆಯ ಹಾಡು ನೀಡುತ್ತ ಮನಸಿಗೆ ಮುದ ನೀಡಲಿವೆ.
  • ಕೂಡುವಿಕೆಗೆ(connectivity) USB ಕಿಂಡಿ, Bluetooth ಕಿಂಡಿಗಳನ್ನು ಕೊಡಮಾಡಿದ್ದಾರೆ.

ಇಶ್ಟೆಲ್ಲ ಇದ್ದರೂ ಸುಯ್-ಅಂಕೆ ಏರ‍್ಪಾಟು(Cruise Control System), ಬೆಳಕಿಂಡಿ(Sun Roof), ತಾನಾಗೇ ಬೆಳಗಬಲ್ಲ ಮುಂದೀಪಗಳು(Automatic Headlights), ತಾನಾಗೇ ಶುರುವಾಗಬಲ್ಲ ಒರೆಸುಕ(Automatic Wiper) ನೀಡದೇ ಇರುವುದು ಕಂಪಾಸ್ ಬಂಡಿಗೆ ಕೊರತೆಯಾಗಿ ಕಾಣಬಹುದು. ಕೆಂಪು, ನೀಲಿ, ಬಿಳಿ, ಕಪ್ಪು ಮತ್ತು ಕಂದು ಹೀಗೆ 5 ಬಣ್ಣಗಳಲ್ಲಿ ಕಂಪಾಸ್ ಬಂಡಿ ದೊರೆಯುತ್ತದೆ.

ಕಾಪಿನ ವಿಶೇಶತೆಗಳು(Safety Features):

6 ಗಾಳಿ ಚೀಲಗಳು(Air Bags), ಸಿಲುಕಿನ ತಡೆತದ ಏರ‍್ಪಾಟು(Anti-Lock Braking System), ನಿಲುಗಡೆಗೆ ಹಿಂಬದಿಯ ತಿಟ್ಟಕ(Reverse Parking Camera), ಗುಡ್ಡ-ಬೆಟ್ಟಗಳನ್ನೇರುವಾಗ ನೆರವು ಒದಗಿಸುವ ಏರ‍್ಪಾಟು (Hill Start System), ಮಳೆ-ಬೇಸಿಗೆ-ಚಳಿಗಾಲ ಎಲ್ಲ ಕಾಲಕ್ಕೂ ಹೊಂದಿಕೊಳ್ಳುವ ಟೈರ್‌ಗಳು, ಹಿಂದುಗಡೆಯ ಒರೆಸುಕ ಮತ್ತು ಮಂಜಿಳಕ(Rear Wiper and Defogger) ಹೀಗೆ ಒಟ್ಟು 50ಕ್ಕೂ ಹೆಚ್ಚು ಕಾಪಿನ ವಿಶೇಶತೆಗಳನ್ನು ಒಳಗೊಂಡಿರಲಿದೆಯಂತೆ ಕಂಪಾಸ್ ಬಂಡಿ.

ಪಯ್ಪೋಟಿ ಮತ್ತು ಹೋಲಿಕೆ:

ಜೀಪ್ ಕಂಪಾಸ್ ಬಂಡಿಯನ್ನು ಟಾಟಾ ಹೆಕ್ಸಾ, ಮಹೀಂದ್ರಾ ಎಕ್ಸ್‌ಯುವಿ 5ಒಒ, ಹ್ಯುಂಡಾಯ್ ಟುಸಾನ್ ಬಂಡಿಗಳೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಬಿಣಿಗೆಗಳ ಹೋಲಿಕೆಯಲ್ಲಿ ಹೆಕ್ಸಾ ಮತ್ತು ಎಕ್ಸ್‌ಯುವಿಗಳ ಡೀಸೆಲ್ ಬಿಣಿಗೆ ಹೆಚ್ಚಿನ ಅಳತೆಯದ್ದಾಗಿವೆ. ಚಿಕ್ಕ ಅಳತೆಯ ಬಿಣಿಗೆಯಾದರೂ ಕಂಪಾಸ್ ಬಿಣಿಗೆ ಹೆಚ್ಚಿನ ಕಸುವು ಉಂಟು ಮಾಡುತ್ತದೆ. ತಿರುಗುಬಲದ ವಿಶಯದಲ್ಲಿ ಎಕ್ಸ್‌ಯುವಿಗಿಂತ ಕೊಂಚ ಕಂಪಾಸ್ ಕೊಂಚ ಮುಂದಿದ್ದರೂ, ಹೆಕ್ಸಾ ಮತ್ತು ಟುಸಾನ್‌ಗಳು 400 ನ್ಯೂಟನ್ ಮೀಟರ್ ತಿರುಗುಬಲ ನೀಡುವ ಮೂಲಕ ಕಂಪಾಸ್ ಅನ್ನು ಹಿಂದಿಕ್ಕಿವೆ. ಮೈಲಿಯೋಟದಲ್ಲಿ ಹೆಕ್ಸಾ, ಎಕ್ಸ್‌ಯುವಿ ಮತ್ತು ಟುಸಾನ್‌ಗಳು ಮೂರು ಬಂಡಿಗಳು ಕಂಪಾಸ್ ಮುಂದೆ ಸೋಲುತ್ತವೆ. ಪೆಟ್ರೋಲ್ ಕಂಪಾಸ್ ಮೈಲಿಯೋಟ ಇನ್ನೂ ತಿಳಿದು ಬಂದಿಲ್ಲ, ಹಾಗಾಗಿ ಟುಸಾನ್ ಪೆಟ್ರೋಲ್ ಬಿಣಿಗೆಯೊಂದಿಗೆ ಇದನ್ನು ಹೋಲಿಕೆ ಮಾಡಲಾಗಿಲ್ಲ.

ಇನ್ನೂ ಉದ್ದ, ಅಗಲ, ಎತ್ತರ, ಗಾಲಿಗಳ ನಡುವಿನ ದೂರ ಹೀಗೆ ಹೆಚ್ಚಿನ ಆಯಗಳಲ್ಲಿ ಜೀಪ್ ಕಂಪಾಸ್ ತನ್ನ ಎದುರಾಳಿ ಬಂಡಿಗಳ ಪಯ್ಪೋಟಿಯಲ್ಲಿ ಹಿಂದೆ ಬಿದ್ದಿದ್ದರೂ, ಇಲ್ಲಿ ಗಮನಿಸಬೇಕಾದ ಮುಕ್ಯ ಅಂಶವೆಂದರೆ, ಹೆಕ್ಸಾ,ಎಕ್ಸ್‌ಯುವಿ ಮತ್ತು ಟುಸಾನ್ ಬಂಡಿಗಳು 6-7 ಮಂದಿ ಕೂರಿಸಿಕೊಂಡು ಹೋಗಬಲ್ಲ ಕೊಂಚ ದೊಡ್ಡ ಬಂಡಿಗಳು ಎನ್ನಬಹುದು.

ಬೆಲೆ:

ಬಾರತದ ಮಾರುಕಟ್ಟೆಯನ್ನು ಚೆನ್ನಾಗಿ ಅಳೆದು ತೂಗಿ ಅಗ್ಗದ ಬೆಲೆಯ ಆಟೋಟದ ಬಳಕೆ ಬಂಡಿಯನ್ನು ಬಿಡುಗಡೆ ಮಾಡಿ ಬಾರಿ ಪೈಪೋಟಿಗೆ ಪಿಯಟ್ ಕ್ರೈಸ್ಲರ್ ಕೂಟ ತಯಾರಾಗಿದೆ.  ಸ್ಪೋರ‍್ಟ್, ಲಾಂಜಿಟ್ಯೂಡ್ ಮತ್ಗ್ತು ಲಿಮಿಟೆಡ್ ಎಂಬ 3 ಬಗೆಯ ಮಾದರಿಗಳಲ್ಲಿ ಕಂಪಾಸ್ ಬಂಡಿ ಸಿಗಲಿದ್ದು, ಎಲ್ಲ ಮಾದರಿಗಳ ಬೆಲೆ ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ. ದುಬಾರಿ ಬಂಡಿಗಳ ಸಾಲಿಗೆ ಸೇರಿದ್ದ ಜೀಪ್ ಬಂಡಿ ಕೂಟ, ತಾನು ಅಗ್ಗವಾಗಿ ಒಳ್ಳೆಯ ಬಂಡಿ ತಯಾರಿಸಿ ಬಿಡುಗಡೆ ಮಾಡಬಲ್ಲೆ ಎಂಬುದನ್ನು ಕಂಪಾಸ್ ಬಂಡಿ ಮೂಲಕ ತೋರಿಸಿ ಮಾರುಕಟ್ಟೆಯಲ್ಲಿ ನೆಲೆಯೂರುವ ಲಕ್ಶಣ ತೋರುತ್ತಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: jeep.comautocarindia.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: