ಬದುಕಿಗೆ ದೇವತೆಯಂತೆ

ಸವಿತಾ.

ಉಕ್ಕುವ ಪ್ರೀತಿ ಸಾಮೀಪ್ಯಕೆ
ಹಾತೊರೆಯುವಂತೆ

ಒಡನಾಟದಲಿ
ಬಾವಗಳು ಬೆಸೆದಂತೆ

ಬರವಸೆಯಲಿ
ಬೆಳಕೊಂದು ಮೂಡಿದಂತೆ

ಸಂಬಂದದಲಿ
ಬದ್ರತೆ ಅಚಲವಾದಂತೆ

ಮನವ ತಣಿಸುತ
ಜತೆಯಿದ್ದು ಪ್ರೇರಕಶಕ್ತಿಯಂತೆ

ಸತತ ಓಲೈಸುತ
ನಿರಂತರ ಸ್ಪೂರ‍್ತಿವಾಹಿನಿಯಂತೆ

ಈ ಹೆಣ್ಣು
ಬದುಕಿಗೆ ದೇವತೆಯಂತೆ

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಸರ್ ನಮಸ್ಕಾರ. ನನ್ನ ಬರಹ ನಿಮ್ಮ ತಾಣಕ್ಕೆ ಕಳಿಸಬಹುದೆ? ತಮ್ಮ email ದಯವಿಟ್ಟು ತಿಳಿಸಿ.

  2. ಕಂಡಿತವಾಗಿ. ಬರಹಗಳನ್ನು ಇಲ್ಲಿಗೆ ಕಳಿಸಿ: [email protected]

    ಹೆಚ್ಚಿನ ಮಾಹಿತಿಗೆ ಈ ಕೊಂಡಿಯನ್ನು ನೋಡಿ.

    http://128.199.25.99/%E0%B2%AC%E0%B2%B0%E0%B2%B9-%E0%B2%95%E0%B2%B3%E0%B3%81%E0%B2%B9%E0%B2%BF%E0%B2%B8%E0%B2%BF/

ಅನಿಸಿಕೆ ಬರೆಯಿರಿ: