ಮನುಜ ಕಾಣ್…
– ಕೌಸಲ್ಯ.
ಪರರ ನೋಯಿಸುವ ತಾನ್
ನೋವಿನ ಪರಿಯನು ಕಾಣ
ಪರರ ನಿಂದಿಸುವ ತಾನ್
ಸದಾ ಪರರ ಚಿಂತನೆಯೊಳಿರ‍್ಪನೆಂದರಿಯ
ಮನುಜ ಕಾಣ್
ಹುಟ್ಟಿದ ತಾನ್ ಜೀವದನೆಲೆಯೊಳು
ಬ್ರಮಿಸಿಕೊಂಡಿರ‍್ಪ ತಾನೆ ಜಗದೊಳು
ಮರಣದ ಶಯ್ಯೆಯೊಳಕ್ಕೆ ಪೋಗಲಾರೆ
ಇಹುದೆನಗೆ ಶಾಶ್ವತದ ನೆಲಜಲವೆಂಬಂತಿರೆ
ಮನುಜ ಕಾಣ್
ಇಹಲೋಕ ಪರಲೋಕ ಪಾತಾಳಲೋಕ
ಎಲ್ಲವೂ ನಾಕ ನರಕ ಈ ಬೂಲೋಕ
ಬ್ರಮರಬ್ರಮರದ ಸುಳಿಯ ಜಾತಕ
ತಾನ್ ನಾನೆಂಬ ಅಹಂಕಾರದ ಸೂಚ್ಯಕ
ಮನುಜ ಕಾಣ್
ಅದಿಕಾರದ ಮದದ ಹುಚ್ಚೇರಿ
ತೀರದ ದರ‍್ಪ ಬಾವದ ಅಮಲೇರಿ
ನಡೆ-ನುಡಿಗಳೆಲ್ಲಾ ನಂಜೇರಿ
ಅವ ನಡೆದಾಡಿದರೆ ಗರಿಕೆ ಬೆಳೆಯದ ಬಂಜರು
ಮನುಜ ಕಾಣ್
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು