
Sunset Pair Romance Love Bank Nature Lovers Lake
ಸಂಜೆಯೊಂದಿಗೆ ಮನ ಮಂಜಾಗಲು
– ಸಂದೀಪ ಔದಿ.
ಮಳೆಗಾಲ ಮಲೆನಾಡಿನಲ್ಲಿ
ಕೊಡೆಹಿಡಿದು ಇಳಿಜಾರಿನಲ್ಲಿ
ಮೆಲ್ಲನೆ ನೀ ನಡೆಯುವಾಗ
ಇಬ್ಬನಿ ರಾಶಿಯ ಹಸಿರ ಹಾಸಿನಮೇಲೆ
ಉಶೆಯ ಆರಂಬದ ಗಳಿಗೆಯಲ್ಲಿ
ಮೆಲ್ಲನೆ ನೀ ಮೈ ಮುರಿಯುವಾಗ
ಹುಣ್ಣಿಮೆ ರಾತ್ರಿಯಲ್ಲಿ
ಚಂದ್ರ ತಾರೆಯರ ಹೊನಲ ಬೆಳಕಲ್ಲಿ
ನಲ್ಲನ ನೀ ನೆನೆಯುವಾಗ
ಕವಿಯಾಗದಿರಲು ನಾನು
ಲೇಕನಿ-ಶಾಹಿ-ಬಿಳಿಹಾಳೆಗೆ ಮಾಡುವ ಅವಮಾನ
***
ಬಾನಲ್ಲಿ ತಿಳಿ ಕೆಂಬಣ್ಣ
ಕಣ್ಣಲ್ಲಿ ತುಸು ನಾಚಿಕೆ ಹೊಂಬಣ್ಣ
ಇನ್ನೇನು ಬೇಕು ಸಂಜೆ ರಂಗೇರಲು
ನೀ ಹಾಡುತಿರಲು ಪಿಸುಗಾನ
ತೀರದೆಡೆಗೆ ಅಲೆಯ ಯಾನ
ಇನ್ನೇನು ಬೇಕು ಸಂಜೆ ರಸಮಯವಾಗಲು
ತಂಗಾಳಿ ಮುಂಗುರುಳ ಸಂವಾದ
ಸೀರೆ ಅಂಚಿಗೂ ಬೆರಳಿಗೂ ವಿವಾದ
ಇನ್ನೇನು ಬೇಕು ಸಂಜೆಯೊಂದಿಗೆ ಮನ ಮಂಜಾಗಲು
(ಚಿತ್ರ ಸೆಲೆ: freegreatpicture.com)
Olleya Kavithe…
ಧನ್ಯವಾದ