ನೀ ಕನ್ನಡದ ಸ್ವತ್ತು
ಕಣ್ ಕನ್ನಡ ಕಂಡು
ಎದೆ ಬಿರಿದು
ಕೇಳಿ ಕಿವಿ ನಿಮಿರಿ
ಚಿತ್ತ ಸರಿಯದೆ ನಿಂದು
ನನ್ನದೋ ನನ್ನದಿದು
ನುಡಿ ಎನಿಸಿದೆಡೆ
ನೀ ಕನ್ನಡದ ಸ್ವತ್ತು.
ತಿಂದ ಕೈ ತುತ್ತಿಗೆ
ಬಾಶೆಯುಲಿವ ನಾಲಿಗೆ
ಆಡಿದ್ದೇ
ರುಣ ಸಂದಾಯ
ನಮ್ಮವ್ವಗೆ.
ಅವಳಿತ್ತ ಕಸುವಿಗೆ
ಗೇಹ ಹಾರುವ ಹನುಮ
ಎಲ್ಲಿಗಾದರು ಹಾರೋ
ಎಲ್ಲೆಗಳ ಮೀರಿ
ನಿಲ್ಲಿಸಿ ಕೇಳಿದರೆ
ಎದೆಬಗೆದು ತೋರು
ಅಂತರಾತ್ಮ
ಕನ್ನಡ ರಾಮ.
(ಚಿತ್ರ ಸೆಲೆ: starofmysore.com)
ಇತ್ತೀಚಿನ ಅನಿಸಿಕೆಗಳು