ಮತ್ತೆ ಬಂದಿದೆ ಕಡಲೆಕಾಯಿ ಪರಿಶೆ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ).

ಮತ್ತೆ ಬಂದಿದೆ ಕಡಲೆಕಾಯಿ ಪರಿಶೆ ಬಸವನಗುಡಿಯಲ್ಲಿ
ಆಗಲೇ ಕುಳಿತಿಹರು ಮಾರಲು ಅತಿ ಸಂಬ್ರಮದಲ್ಲಿ
ಎಲ್ಲಿ ನೋಡಿದರಲ್ಲಿ ಹಳ್ಳಿ ಜಾತ್ರೆಯ ವಾತಾವರಣ
ಇದಕ್ಕೆಲ್ಲ ನಮ್ಮ ಸಂಸ್ಕ್ರುತಿಯೇ ಕಾರಣ

ಜಗಮಗಿಸುವ ವಿದ್ಯುತ್ ದೀಪಗಳ ಅಲಂಕಾರ
ನೋಡಿಯೇ ತಿಳಿಯಬೇಕು ಅಲ್ಲಿಯ ಸಿಂಗಾರ
ಮಕ್ಕಳಿಗೆ ಬೇಕಾದ ವಿವಿದ ರೀತಿಯ ಆಟಿಕೆಗಳು
ಹಿರಿಯ ನಾಗರಿಕರಿಗೆ ಕಾಡುವ ಹಳೆಯ ನೆನಪುಗಳು

ಹಸಿವು ಹೆಚ್ಚಿಸಲೆಂದೇ ಇರುವ ತಿಂಡಿ ತಿನಿಸುಗಳು
ಗಂಟಲು ಒಣಗಿದರೆ ದಣಿವಾರಿಸಲು ಪಾನೀಯಗಳು
ಎಶ್ಟು ವರ‍್ಣಿಸಿದರೂ ಸಾಲದು ಈ ಜಾತ್ರೆಯನ್ನ
ಮರೆಸಿ ಬಿಡುವುದು ಪಕ್ಕದಲ್ಲಿ ಇರುವ ಹೆಂಡತಿಯನ್ನ

ಕೆಲಸ ಎಶ್ಟಿದ್ದರೂ ಸರಿಯೇ ಬೇಟಿ ಕೊಡಿ ಒಮ್ಮೆ
ಯಾಕೆಂದರೆ ಬರುವುದು ಈ ಜಾತ್ರೆ ವರುಶಕೊಮ್ಮೆ
ಬಂದ ಮೇಲೆ ಕರೀದಿಸದೆ ಇರಲಾರಿರಿ ಕಡಲೆಕಾಯಿಯನ್ನ
ದಯವಿಟ್ಟು ತಂದು ಬಿಡಿ ಮನೆಯಿಂದ ಬ್ಯಾಗ್ ಒಂದನ್ನ

(ಚಿತ್ರ ಸೆಲೆ: swadesi.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: