ಹೆಣ್ಣಲ್ಲವಳು, ಈ ವಿಶ್ವದ ಕಣ್ಣು

– ಶರಣು ಗೊಲ್ಲರ.

ಹೆಣ್ಣಲ್ಲವಳು ಈ ವಿಶ್ವದ ಕಣ್ಣು
ಹೆಣ್ಣಿರದಿರೆ ಬಾಳಲಿ ತಿನ್ನುವೆ ನೀ ಮಣ್ಣು

ತಾಯಿಯಾಗಿ, ಅಕ್ಕ ತಂಗಿಯೆನಿಸಿ
ಮಡದಿಯಾಗಿ ಹ್ರುದಯದೊಳು ನೆಲೆಸಿ
ಮಗಳ ರೂಪದಿ ಅಂಗೈಯಲಿ ಬೆಳೆದು
ಕೀರ‍್ತಿ ಮನೆಗೆ ತಂದು ಕೊಡುವಳು

ಮಾಯೆಯಲ್ಲ ತಾಯಿಯಾಕೆ
ಪ್ರೀತಿ ಮಮತೆ ಕೊಟ್ಟಳೀ ಜಗಕೆ
ಮುದ್ದು ಮಾಡಿ ತುತ್ತು ತಿನಿಸಿ
ಮುಗಿಲೆತ್ತರಕ್ಕೆ ಬೆಳೆಸುವಳು

ನೋವು ಸಹಿಸಿಕೊಂಡು ತನ್ನ
ಪ್ರಾಣವನ್ನೇ ಒತ್ತೆಯಿಟ್ಟು
ನಮಗೆ ಜೀವದಾನವಿತ್ತ
ಮಾತೆ ಮಹಾದಾನಿಯವಳು

ಸ್ರುಶ್ಟಿಕರ‍್ತನಂತೆ ಅಳಿವು ಉಳಿವು
ಅವಳ ಕೈಯಲಿರುವುದು ನೋಡು
ಕಣ್ಣಿಗಿಂದು ಕಾಣುತಿರುವ
ಮಾತನಾಡೊ ದೇವರವಳು

(ಚಿತ್ರ ಸೆಲೆ: artponnada.blogspot.in )

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: