ಬದುಕೀಗ ಅನಿಶ್ಚಿತ ದಾರಿಯಲಿ

– ಸವಿತಾ.

ಅನಿಶ್ಚತತೆಯ ಬದುಕು

ಸ್ವತಂತ್ರತೆಯ ಪರಿಕಲ್ಪನೆಯಲಿ
ಸ್ವೇಚ್ಚೆಯ ಹಾದಿಯಲಿ

ಮನ ಅಲ್ಲೋಲ ಕಲ್ಲೋಲದಲಿ
ಮಿತಿಮೀರಿದ ಆಸೆಯಲಿ

ಒತ್ತಡದ ಜಂಜಾಟದಲಿ
ಅತ್ರುಪ್ತ ಮನಸಿನಲಿ

ಗೊಂದಲದ ಗೂಡಲಿ
ಹೆಣಗುವ ಮಾನವನಿಲ್ಲಿ

ಬವರೋಗಗಳ ಹಾವಳಿಯಲಿ
ಪ್ರಾಣವ ಕಾಪಾಡುವಲಿ

ಹೋರಾಡುತಿರುವ ಪರಿಸ್ತಿತಿಯಲಿ
ಪ್ರಶ್ನೆಗಳ ಸುರಿಮಳೆಯಲಿ

ಎಲ್ಲಾ ಅಸ್ಪಶ್ಟ ಅತಂತ್ರತೆಯಲಿ
ಸಾಗುತಿಹುದೆಲ್ಲಿ

ಬದುಕೀಗ ಅನಿಶ್ಚಿತ ದಾರಿಯಲಿ
ಅರಿಯದ ನಿಗೂಡ ಪ್ರಶ್ನೆಯಲಿ

( ಚಿತ್ರ ಸೆಲೆ:  jonathanstein.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: