ಹಬ್ಬಗಳ ಹೊತ್ತಿನಲ್ಲಿ ಮಾಡಬಹುದಾದ ಸಿಹಿ ಅಡುಗೆ: ಮಾದಲಿ

– ಸವಿತಾ.

ಬೇಕಾಗುವ ಪದಾರ‍್ತಗಳು:

 • 1/2 ಕೆಜಿ ಗೋದಿ
 • 1 ಚಮಚ ಅಕ್ಕಿ
 • 1 ಚಮಚ ಕಡಲೇಬೇಳೆ
 • 1/4 ಕೆಜಿ ಪುಡಿ ಮಾಡಿದ ಬೆಲ್ಲ
 • 1 ಚಮಚ ಗಸಗಸೆ
 • 1 ಚಮಚ ಪುಟಾಣಿ ( ಹುರಿಗಡಲೆ )
 • 1 ಚಮಚ ಒಣಕೊಬ್ಬರಿ ತುರಿ
 • 6 ಏಲಕ್ಕಿಯ ಪುಡಿ
 • 1/4 ಚಮಚ ಉಪ್ಪು

ಮಾಡುವ ಬಗೆ:

 • ಅಕ್ಕಿ ಮತ್ತು ಕಡಲೇಬೇಳೆ ಬೇರೆ ಬೇರೆಯಾಗಿ ಹುರಿದು ನಂತರ ಗೋದಿಯ ಜೊತೆಗೆ ಸೇರಿಸಿ ಗಿರಣಿಯಲ್ಲಿ ಉರುಟು ಉರುಟಾಗಿ ಹಿಟ್ಟು ಮಾಡಿಸಿರಿ
 • ಹಿಟ್ಟು ಮತ್ತು ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ಹಿಟ್ಟು ಕಲೆಸಿಕೊಂಡು ದಪ್ಪ ಚಪಾತಿ ಮಾಡಿ ( ಎಣ್ಣೆ ಹಾಕದೇ ) ಎರಡೂ ಬದಿ ಬೇಯಿಸಿರಿ
 • ಮಾಡಿಟ್ಟ ಚಪಾತಿ ಮುರಿದು ಮಿಕ್ಸರ್ ನಲ್ಲಿ ಪುಡಿ ಮಾಡಿ ಇಡಿ
 • ಮಿಕ್ಸರ್ ನಲ್ಲಿ ಪುಡಿಯಾದ ಚಪಾತಿಗೆ ಬೆಲ್ಲದ ಪುಡಿ ಹಾಕಿ
 • ಗಸಗಸೆ, ಪುಟಾಣಿ, ಉಪ್ಪು, ಒಣಕೊಬ್ಬರಿ ತುರಿ, ಏಲಕ್ಕಿಯ ಪುಡಿ ಹಾಕಿ ಚೆನ್ನಾಗಿ ಕಲಸಿದರೆ ಮಾದಲಿ ತಯಾರು

ತುಪ್ಪ ಮತ್ತು ಹಾಲು ಹಾಕಿ ಕೊಂಡು ಮಾದಲಿಯನ್ನು ಸವಿಯಿರಿ 🙂

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: