ನೋವೇ, ನೀ ಮೌನವಾಗಿ ಸುಡುವೆ…

– ವಿನು ರವಿ.

ನೋವೇ,
ನೀ ಮೌನವಾಗಿ ಸುಡುವೆ
ಒಳಗೊಳಗೆ ದಹಿಸುವೆ
ಅಶ್ರುದಾರೆ ಹರಿಸುವೆ

ನೀ ಪರಮ ಗುರುವಾಗಿ
ಪಾಟ ಕಲಿಸುವೆ
ಚಾಟಿ ಏಟು ಬೀಸಿ
ಬದುಕಿನ ಪಾಟ ಕಲಿಸುವೆ

ನೀ ಒಂಟಿ ಬಾವಗಳ
ಅರ‍್ತ ಕಳೆಯುವೆ
ದ್ವನಿಯ ಮುರುಟುವೆ
ಒಲವ ಕಳೆಯುವೆ

ನೀ ದ್ಯಾನಿಯಾಗಿ
ಏಕಾಂತ ಬಯಸುವೆ
ಅಹಂನ ಬೇರು ಕಿತ್ತೆಸೆವೆ

ನೋವೇ, ನೀನಿಲ್ಲದೆ
ನಲಿವಿನ, ಒಲವಿನ
ಬೆಲೆಯ ನಾ ಹೇಗೆ ತಿಳಿಯುವೆ?

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: