ದೇಶಕೆ ಅನ್ನವ ನೀಡುವ ರೈತ

– ಶಾಂತ್ ಸಂಪಿಗೆ.

ದೇಶಕೆ ಅನ್ನವ ನೀಡುವ ರೈತ
ಬೂತಾಯಿಗೆ ಚೊಚ್ಚಲ ಮಗನೇ ಈತ

ಹೊಲದಲಿ ಬೆಳೆಯುವ ಬೆಳೆಗಳಿಗೆಲ್ಲಾ
ದನಿಕರು ಬೆಲೆಯ ಕಟ್ಟುವರಲ್ಲಾ
ಕರ‍್ಚು ವೆಚ್ಚವು ಗಣನೆಗೆ ಇಲ್ಲಾ
ರೈತರ ಪಾಲಿಗೆ ನಶ್ಟವೇ ಎಲ್ಲಾ

ಹಗಲು ಇರುಳು ದುಡಿಯುವ ತ್ಯಾಗಿ
ಮೋಸ ವಂಚನೆ ತಿಳಿಯದ ಯೋಗಿ
ಲಾಬ ನಶ್ಟವ ಸಹಿಸುತ ದುಡಿವ
ಸಾಲದ ಶೂಲಕೆ ಸಿಕ್ಕಿ ಮಡಿವ

ಬೋಗದ ಬದುಕನು ಬಯಸನು ರೈತ
ಮಾನವೇ ಪ್ರಾಣ ಎನ್ನುವ ಈತ
ಯಾರಿಗು ಕೇಡನು ಬಯಸದ ಈತ
ದೇಶಕೆ ಸಮ್ರುದ್ದಿ ತರುವನು ರೈತ

ದಾವಿಸಿ ಎಲ್ಲರು ರೈತರ ನೆರವಿಗೆ
ಶ್ರಮಿಸುವ ನಾವು ರೈತರ ಗೆಲುವಿಗೆ
ಅನ್ನವೇ ಬೇಕು ನಾಳೆಯ ಬಾಳಿಗೆ
ರೈತರೇ ಬೇಕು ದೇಶದ ಏಳ್ಗೆಗೆ

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: