ಬಾಯಲ್ಲಿ ನೀರೂರಿಸುವ ಜೇನುತುಪ್ಪದ ಕೇಕ್

– ಪ್ರೇಮ ಯಶವಂತ.

ಜೇನುತುಪ್ಪದ ಕೇಕ್

ಕೇಕ್‍ಗೆ ಬೇಕಾಗಿರುವ ಅಡಕಗಳು

ಗೋದಿ ಹಿಟ್ಟು – 1 3/4 ಬಟ್ಟಲು
ಸಕ್ಕರೆ- 1 ಬಟ್ಟಲು
ಅಡುಗೆ ಎಣ್ಣೆ – 3/4 ಬಟ್ಟಲು
ಅಡುಗೆ ಸೋಡ – 2 ಚಮಚ
ವೆನಿಲ್ಲಾ ರಸ – 2 ಚಮಚ
ಉಪ್ಪು – 1/2 ಚಮಚ
ಮೊಟ್ಟೆ – 4
ಹಾಲು – 3/4 ಬಟ್ಟಲು
ಬೇಕಿಂಗ್ ತಟ್ಟೆ – 9 ಇಂಚಿನದು

ಸಕ್ಕರೆ ಪಾಕದ ಅಡಕಗಳು

ನೀರು – 1 ಬಟ್ಟಲು
ಸಕ್ಕರೆ – 2-3 ಚಮಚ ಇಲ್ಲವೇ ಸಿಹಿ ಬೇಕಾಗುವಶ್ಟು
ಜೇನು ತುಪ್ಪ – 1/2 ಬಟ್ಟಲು

ಸಿಹಿಹಚ್ಚಿಕೆ ಮಾಡಲು ಬೇಕಾದ ಅಡಕಗಳು

ಹಣ್ಣಿನ ಗೊಜ್ಜು (ಜಾಮ್) – 3-4 ಚಮಚ
ಸಕ್ಕರೆ – 1 ಚಮಚ ( ಆಯ್ಕೆಗೆ ಬಿಟ್ಟದ್ದು)
ಒಣ ಕೊಬ್ಬರಿ ತುರಿ

ಕೇಕ್ ಮಾಡುವ ಬಗೆ

ಮೇಲೆ ತಿಳಿಸಿರುವ ಕೇಕ್‍ನ ಅಡಕಗಳನ್ನು ಒಂದು ದೊಡ್ಡ ಬಟ್ಟಲಲ್ಲಿ ಸೇರಿಸಿ ಗಂಟಿಲ್ಲದ ಹಾಗೆ ಚೆನ್ನಾಗಿ ಕಲಸಿ. ಕೇಕ್ ಬೆಂದಮೇಲೆ ತೆಗೆಯಲು ಸುಳುವಾಗಿಸುವುದಕ್ಕೆ ಕೇಕ್ ಬೇಯಿಸುವ ತಟ್ಟೆಗೆ ಸ್ವಲ್ಪ ಎಣ್ಣೆ ಇಲ್ಲವೇ ಬೆಣ್ಣೆಯನ್ನು ಸವರಿ ಮತ್ತು ಸ್ವಲ್ಪ ಗೋದಿ ಹಿಟ್ಟನ್ನು ಉದುರಿಸಿ. ಕಲಸಿದ ಮಿಶ್ರಣವನ್ನು ತಟ್ಟೆಯ ಮುಕ್ಕಾಲು ಬಾಗ ತುಂಬಿರಿ. ನಿಮ್ಮ ಒಲೆಯನ್ನು(conventional oven) 350 ಡಿಗ್ರಿಗೆ ಮುಂಬಿಸಿ(pre-heat) ಮಾಡಿ. ಸಿದ್ದಗೊಳಿಸಿದ ಕೇಕ್ ತಟ್ಟೆಯನ್ನು ಒಲೆಯಲ್ಲಿಡಿ. 30-40 ನಿಮಿಶ ಅತವ ಕೇಕ್ ಆಗುವವರೆಗು ಬಿಡಿ (ಚಮಚದ ಹಿಂಬಾಗವನ್ನು ಕೇಕ್ ಒಳಗೆ ಹಾಕಿ ತೆಗೆದಾಗ ಏನು ಅಂಟಿರಬಾರದು). ಕೇಕ್ ಬೆಂದಮೇಲೆ ಹೊರತೆಗೆದು ತಣ್ಣಗಾದಮೇಲೆ ಒಂದು ತಟ್ಟೆಯಲ್ಲಿ ಕೇಕನ್ನು ತೆಗೆದಿಟ್ಟುಕೊಳ್ಳಿ.

ಪಾಕ ಮಾಡುವ ಬಗೆ

ಒಂದು ಪಾತ್ರೆಯಲ್ಲಿ ಒಂದು ಬಟ್ಟಲು ನೀರು, ಸಕ್ಕರೆ, ಜೇನುತುಪ್ಪವನ್ನು ಒಂದು ಕುದಿ ಬರುವವರೆಗು ಕಾಯಿಸಿ ಅಣಿಯಾದ ಕೇಕ್ ಮೇಲೆ ಹಾಕಿರಿ. ಈ ಪಾಕವನ್ನು ಕೇಕ್ ಹೀರಿಕೊಳ್ಳುತ್ತದೆ.

ಸಿಹಿ ಹಚ್ಚಿಕೆ ಮಾಡುವ ಬಗೆ

ಪಾಕ ಮಾಡಿದ ಪಾತ್ರೆಯಲ್ಲಿ ಹಣ್ಣಿನ ಗೊಜ್ಜನ್ನು ಹಾಕಿ ಕರಗುವವರೆಗು ಬಿಸಿ ಮಾಡಿ. ಈ ಹಂತದಲ್ಲಿ ಸಕ್ಕರೆ ಇನ್ನಶ್ಟು ಬೇಕಿದ್ದರೆ ಬೆರಸಬಹುದು. ಇದು ಕರಗಿದ ಮೇಲೆ ಕೇಕ್ ಮೇಲೆ ಸವರಿ ಒಣ ಕೊಬ್ಬರಿಯ ತುರಿಯನ್ನು ಉದುರಿಸಿ ತಣ್ಣಗಾಗಲು ಬಿಡಿ.

ನಿಮ್ಮ ನೆಚ್ಚಿನ ಜೇನುತುಪ್ಪದ ಕೇಕ್ ಮನದುಂಬಿ ಸವಿಯಲು ಸಿದ್ದವಾಗಿದೆ.

(ಚಿತ್ರ ಸೆಲೆ: ಪ್ರೇಮ ಯಶವಂತ.)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications