ಯಾವ ಗಿಡಮರ ಗೊಣಗಿಲ್ಲ

– ಚಂದ್ರಗೌಡ ಕುಲಕರ‍್ಣಿ.

ಬೇಸಿಗೆ ತಾಪ ಹೆಚ್ಚು ಎನ್ನುತ
ಯಾವ ಗಿಡಮರ ಗೊಣಗಿಲ್ಲ
ನಾಡಿನ ಜನರಿಗೆ ತಂಪು ಗಾಳಿಯ
ಸೂಸುತ್ತಿರುವವು ದಿನವೆಲ್ಲ

ಬಿಟ್ಟೂಬಿಡದೆ ಜಡಿಮಳೆ ಸುರಿದರೂ
ಒಂಚೂರಾದರೂ ಬಳಲಿಲ್ಲ
ದೂಳು ಕೆಸರನು ತೊಳೆದುಕೊಂಡು
ತಳ ತಳ ಹೊಳೆವುದ ನಿಲ್ಲಿಸಿಲ್ಲ

ಎಲೆಗಳೆಲ್ಲ ಉದುರಿಹೋದರೂ
ಚಳಿಚಳಿ ಚಳಿಗೆ ನಡುಗಿಲ್ಲ
ಬೂಮಿ ತಿರುಳಿನ ರಸವನು ತುಂಬುತ
ಹಣ್ಣನು ಕೊಡುವುದ ನಿಲ್ಲಿಸಿಲ್ಲ

ಚಂಡಮಾರುತ ಸುನಾಮಿ ಹೊಡೆತವ
ಸಹಿಸಿ ನಿಲ್ಲುವುದೆದೆ ಸೆಟೆಸಿ
ಬರಗಾಲದಲ್ಲೂ ನಳನಳಿಸುವವು
ಬಿಸಿಲಲಿ ಚಿಗುರನು ಪಲ್ಲವಿಸಿ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks