ಪ್ರೀತಿಸು ಮನವೇ ಪ್ರೀತಿಸು

– ವಿನು ರವಿ.

ಪ್ರೀತಿಸು ಮನವೇ ಪ್ರೀತಿಸು
ಚೆಲುವೇ ಎಲ್ಲವೂ
ಪ್ರೀತಿಸು ಮನವೇ ಪ್ರೀತಿಸು

ತಂಪಾಗಿ ಬೀಸುವ ಗಾಳಿಯಾ
ಇಂಪಾಗಿ ಉಲಿಯುವ ಕೋಗಿಲೆಯ
ಸೊಂಪಾಗಿ ಅರಳಿದಾ ಸಂಪಿಗೆಯಾ
ಪ್ರೀತಿಸು ಮನವೇ ಪ್ರೀತಿಸು

ಬಾಲ್ಯದ ತುಂಟ ನೆನಪುಗಳಾ
ಹರೆಯದ ಹೊಸ ಆಸೆಗಳಾ
ಮಾಗಿದ ಮನಸಿನ ಅನುಬವಗಳಾ
ಪ್ರೀತಿಸು ಮನವೇ ಪ್ರೀತಿಸು

ಜೀವ ಜೀವಗಳ ಬೆಸೆವ ಸಂಬಂದವ
ಬಾವಬಾವದೊಳಗಿನಾ ಅನುಬಂದವ
ಹುಟ್ಟು ಸಾವಿನ ಅನಂತತೆಯ
ಪ್ರೀತಿಸು ಮನವೇ ಪ್ರೀತಿಸು

ನೋವಿನಲೆ ಬೇಯುವ ಜೀವವ
ಅನಾತ ಮನಸಿನ ಕನಸನ್ನ
ಒಲವೇ ಕಾಣದ ಮನವನ್ನ
ಪ್ರೀತಿಸು ಮನವೇ ಪ್ರೀತಿಸು

ಚೆಲುವೇ ಎಲ್ಲವೂ
ಪ್ರೀತಿಸು ಮನವೇ ಪ್ರೀತಿಸು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sandeep A says:

    ಚೆನ್ನಾಗಿದೆ…

ಅನಿಸಿಕೆ ಬರೆಯಿರಿ:

Enable Notifications