ವರವ ನೀಡೆನಗೆ ಕನ್ನಡ ತಾಯ್
ವಂದಿಸುವೆ ವಂದಿಸುವೆ
ಕನ್ನಡ ತಾಯ್ ನಿನಗೆ
ಬೇಡುವೆ ಬೇಡುವೆ
ವರವ ನೀಡೆನಗೆ
ಕನ್ನಡಕ್ಕೆ ದುಡಿಯುವಂತ
ಶಕ್ತಿ ನೀಡೆನಗೆ
ಕನ್ನಡವ ಉಳಿಸುವಂತ
ಯುಕ್ತಿ ನೀಡೆನಗೆ
ಇತರರನ್ನು ನಮ್ಮವರೆನಿಸುವ
ಸಹ್ರುದಯವ ನೀಡೆನಗೆ
ಸುಕ ದುಕ್ಕ ಸರಿಗಾಣುವ
ನಿರ‍್ಲಿಪ್ತ ಮನವ ನೀಡೆನಗೆ
ಪರದನಕ್ಕೆ ಕೈ ಚಾಚದಂತ
ಬುದ್ದಿ ನೀಡೆನಗೆ
ಓ ಕನ್ನಡ ರಾಜೇಶ್ವರೀ
ನಿನ್ನ ಪೂಜಿಸುವ ಮನವ ನೀಡೆನಗೆ
(ಚಿತ್ರ ಸೆಲೆ: feelsomu.blogspot.com)
??