ತುಂಬಿದ ಡೊಣ್ಣಮೆಣಸಿನಕಾಯಿ ಪಲ್ಯ!
– ಕಲ್ಪನಾ ಹೆಗಡೆ.
ಏನೇನು ಬೇಕು?
- 10 ಚಿಕ್ಕ ಡೊಣ್ಣಮೆಣಸಿನಕಾಯಿ
- 4 ಚಮಚ ಕಡ್ಲೆಬೇಳೆ
- 4 ಚಮಚ ಉದ್ದಿನಬೇಳೆ
- ಇಂಗು
- ಅರ‍್ದ ಹೋಳು ಕಾಯಿತುರಿ
- 5 ಒಣಮೆಣಸಿನಕಾಯಿ
- 1 ಚಮಚ ಎಳ್ಳು
- ಕಾಲು ಚಮಚ ಹುಣಸೆಹಣ್ಣಿನ ರಸ
- ಕರಿಬೇವು
- ಎಣ್ಣೆ
ಮಾಡುವ ಬಗೆ :
- ಮೊದಲು ಡೊಣ್ಣಮೆಣಸಿನಕಾಯಿಯನ್ನು ತೊಳೆದು, ತೊಟ್ಟನ್ನು ತೆಗೆದು, ಒಳಗಿರುವ ಬೀಜವನ್ನು ತೆಗೆದುಬಿಡಿ.
- ಕಡ್ಲೆಬೇಳೆ, ಉದ್ದಿನಬೇಳೆ, ಒಣಮೆಣಸಿನಕಾಯಿ, ಕರಿಬೇವು, ಇಂಗು ಹಾಕಿ ಹುರಿದು, ಕಾಯಿತುರಿ, ರುಚಿಗೆ ತಕ್ಕಶ್ಟು ಉಪ್ಪು ಹುಣಸೆ ಹಣ್ಣಿನ ರಸ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಜಾಸ್ತಿ ನೀರು ಹಾಕದೆ ಸ್ವಲ್ಪ ಕಡಿ ಕಡಿಯಾಗಿ ಗಟ್ಟಿಯಾಗಿ ರುಬ್ಬಿಕೊಳ್ಳಿ.
- ರುಬ್ಬಿದ ಕಲಕವನ್ನು (ಮಸಾಲೆಯನ್ನು) ಡೊಣ್ಣಮೆಣಸಿನಕಾಯಿಯ ತೊಟ್ಟು ತೆಗೆದ ಬಾಗದಲ್ಲಿ ತುಂಬಿ
- ಬಾಣಲೆಯಲ್ಲಿ ಎಣ್ಣೆ ಹಾಕಿ, ಸಣ್ಣ ಉರಿಯಲ್ಲಿ ಮಸಾಲೆ ತುಂಬಿದ ಡೊಣ್ಣಮೆಣಸಿನಕಾಯಿಯನ್ನು ಚೆನ್ನಾಗಿ ಬೇಯಿಸಿ.
ತುಂಬಿದ ಡೊಣ್ಣಮೆಣಸಿನಕಾಯಿ ಪಲ್ಯವನ್ನು ಅನ್ನದೊಂದಿಗೆ ಸವಿಯಲು ನೀಡಿ. ಚಪಾತಿ ಜೊತೆಗೂ ನಂಜಿಕೊಳ್ಳಲು ಚೆನ್ನಾಗಿರತ್ತೆ. ಅದರಲ್ಲೂ ಅನ್ನದ ಜೊತೆಗೆ ಸವಿಯಲು ತುಂಬಾ ಚೆನ್ನಾಗಿರತ್ತೆ.
?