ಜೀವನವೆ, ನಿನ್ನ ಹಿಂದಿರುಗಿ ನೋಡಿ ಅನಿಸಿತು

ವಿಶ್ವನಾತ್ ರಾ. ನಂ.

ಹೂವೆ, ನಿನ್ನ ನಗುವ ನೋಡೆ ಅನಿಸಿತು
ನಮ್ಮ ನಗುವಿನಲಿ ಜೀವ ಇಲ್ಲವೆಂದು

ಹಕ್ಕಿಯೆ, ನಿನ್ನ ದನಿ ಕೇಳಿ ಅನಿಸಿತು
ನಮ್ಮ ಮಾತಲಿ ಸಿಹಿ ಇಲ್ಲವೆಂದು

ಮಗುವೆ, ನಿನ್ನ ತೊದಲ ಕೇಳಿ ಅನಿಸಿತು
ನಮ್ಮ ನುಡಿಯಲಿ ಸತ್ಯ ಇಲ್ಲವೆಂದು

ನೇಸರನೆ, ನಿನ್ನ ಮಡಿಲಲ್ಲಿ ಅನಿಸಿತು
ನಮ್ಮ ಮನದಲಿ ಸ್ವಾರ‍್ತ ತುಂಬಿದೆಯಂದು

ಜೀವನವೆ, ನಿನ್ನ ಹಿಂದಿರುಗಿ ನೋಡಿ ಅನಿಸಿತು
ನಮ್ಮ ಮನದಲ್ಲೂ ಹೂವು ಅರಳಬಹುದಿತ್ತೆಂದು

ಮಗುವಿನ ನಗು ನಲಿಯಬಹುದಿತ್ತೆಂದು
ಎಲ್ಲರ ಪ್ರೀತಿಸಬಹುದಿತ್ತೆಂದು

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. padmanabha d says:

    ಸುಂದರವಾದ ಕವಿತೆ

ಅನಿಸಿಕೆ ಬರೆಯಿರಿ: