ದಾರವಾಡ ಪೇಡಾ

ಸವಿತಾ.

ದಾರವಾಡ ಪೇಡಾ, Dharwada Peda

ಏನು ಬೇಕು?

 • 1 ಲೀಟರ್ ಹಾಲು
 • 3 ಚಮಚ ಸಕ್ಕರೆ
 • 3 ಚಮಚ ತುಪ್ಪ
 • ಏಲಕ್ಕಿ ಪುಡಿ
 • ಸಕ್ಕರೆ ಪುಡಿ

ಮಾಡುವ ಬಗೆ

 • ಹಾಲು ಕಾಯಿಸಿ ಅದಕ್ಕೆ ನಿಂಬೆ ಹಣ್ಣು ರಸ ಹಿಂಡಿ ಹಾಲು ಒಡೆಸಿ ನೀರು ತೆಗೆಯಿರಿ
 • ಒಂದು ತೆಳುವಾದ ಮಸ್ಲಿನ್ ಬಟ್ಟೆಯಲ್ಲಿ ಕಟ್ಟಿ, ಹಿಂಡಿ, ನೀರು ತೆಗೆಯಿರಿ
 • ಈ ಪನೀರನ್ನು ಒಂದು ಬಾಣಲೆಗೆ ಹಾಕಿ ಬಿಸಿ ಮಾಡಿ
 • ಸಣ್ಣ ಉರಿಯಲ್ಲಿ ಇಟ್ಟು, 2 ಚಮಚ ಸಕ್ಕರೆ, 1 ಚಮಚ ತುಪ್ಪ ಹಾಕಿ ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಹುರಿಯಿರಿ
 • ತಳ ಹಿಡಿದಾಗ ಹಾಲು ಮತ್ತು ತುಪ್ಪ ಹಾಕಿ ಚೆನ್ನಾಗಿ ತಿರುವಿರಿ
 • ಸಕ್ಕರೆ, ತುಪ್ಪ, ಹಾಲು ಹಾಕಿ ಚೆನ್ನಾಗಿ ಗಟ್ಟಿಯಾಗುವವರೆಗೂ ಹಾಗೂ ಕಂದು ಬಣ್ಣ ಬರುವವರೆಗೆ ತಿರುವಿ ಹಾಕಿ, ಒಲೆ ಆರಿಸಿ
 • ಏಲಕ್ಕಿ ಪುಡಿಯನ್ನು ತಿರುವಿ ಇಟ್ಟ ಪೇಡಾ ಮಿಶ್ರಣಕ್ಕೆ ಹಾಕಿ ಕೈಯಾಡಿಸಿ,
 • ದುಂಡಾಗಿ ಅತವಾ ಉದ್ದ ಆಕಾರದಲ್ಲಿ ಪೇಡಾ ಮಾಡಿ, ಸಕ್ಕರೆ ಪುಡಿಯಲ್ಲಿ ಹೊರಳಾಡಿಸಿ ಒಂದೊಂದೇ ತೆಗೆದಿಡಿ.

ಈಗ ರುಚಿಯಾದ ದಾರವಾಡ ಪೇಡಾ ತಿನ್ನಲು ರೆಡಿ 🙂

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: