ಮಕ್ಕಳಿಗಾಗಿ ಚುಟುಕು ಕವಿತೆಗಳು

– ಚಂದ್ರಗೌಡ ಕುಲಕರ‍್ಣಿ.ಮಕ್ಕಳು, ಚುಟುಕುಗಳು, ಕವಿತೆ, children, short poems

*** ಆಣೆಕಲ್ಲು ***

ರಪರಪ ರಪರಪ ಉದುರಿ ಬಿದ್ದರೆ
ಬಣ್ಣದ ಆಣೆಕಲ್ಲು
ನೆಲದಲ್ಲಾಗ ಮೂಡಿಬಿಡುತಿತ್ತು
ಚಂದದ ಕಾಮನ ಬಿಲ್ಲು

*** ಗುಬ್ಬಿ ರೆಕ್ಕೆ ***

ವಿಮಾನದಂತಹ ದೊಡ್ಡಾವು ಎರಡು
ಇದ್ದರೆ ಗುಬ್ಬಿಗೆ ರೆಕ್ಕೆ
ಪುರ‍್ರಂತ ಹಾರಿ ಹೋಗಿಬಿಡತಿತ್ತು
ಚಂದ್ರ-ಮಂಗಳ ಲೋಕಕ್ಕೆ

*** ಕಣ್ಣಾ ಮುಚ್ಚಾಲೆ ***

ಚುಕ್ಕಿ ಚಂದ್ರರು ಆಡುವರೇನು
ಕಣ್ಣಾ ಮುಚ್ಚಾಲೆ
ಹಗಲಲಿ ಅವರು ಏನು ಮಾಡುತ್ತಾರೆ
ಹೇಳು ಈಗಲೆ

*** ಸಿಕ್ಸರು – ಸೋಲಾರು ***

ತುಂಟ ಅಂದು ಹೊಡೆದು ಬಿಟ್ಟಿದ್ದ
ಎಂಟತ್ತು ಬಾಲಿಗು ಸಿಕ್ಸರು
ಬಾನಲ್ಲಿಂದು ಕಾಣುವದಲ್ಲ
ಹೊಸದೆ ಒಂದು ಸೋಲಾರು

*** ಟ್ಯೂಶನ್ ***

ಟ್ಯೂಶನ್ ಶಾಲೆಗೆ ಹೆದರಿದ ಮಕ್ಕಳು
ಬಾನಲಿ ಚುಕ್ಕಿ ಆಗ್ಯಾರ
ಮುಗಿಲಲಿ ಇರುವ ಬಟ್ಟ ಬಯಲಿನ
ಚಂದ್ರನ ಶಾಲೆ ಸೇರ‍್ಯಾರ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: