ಆಸೆಯೇ ಬದುಕಿಗೆ ಆದಿಯೋ …

– ನವೀನ.

ಕನಸು, Dream

ಆಸೆಯೇ ಬದುಕಿಗೆ ಆದಿಯೋ
ಬದುಕೇ ಆಸೆಗೆ ಆದಿಯೋ
ಕಣ್ಣು ನೋಡುವುದೇ ಪ್ರಪಂಚವೋ
ಮನಸ್ಸು ಊಹಿಸುವುದೇ ಪ್ರಪಂಚವೋ

ನಾವು ಇಡುವ ಹೆಜ್ಜೆಯೇ ದಾರಿಯೋ
ಇರುವ ದಾರಿಗೆ ನಮ್ಮ ಹೆಜ್ಜೆಯೋ
ಕನಸು ಕಾಣುವುದೇ ಜೀವನವೋ
ಜೀವನವೇ ಒಂದು ಕನಸೋ

ತನ್ನದು ಎನ್ನುವುದೇ ಸ್ವಾರ‍್ತವೋ
ದಕ್ಕಿದೆ ಎನ್ನುವುದೇ ಗರ‍್ವವೋ
ರಕ್ಶಣೆ ಎಂಬುದೇ ಬೇಲಿಯೋ
ರಕ್ಶಕ ಎಂಬುವವನೆ ಸಂಕೋಲೆಯೋ

ಸೆಳೆತವೇ ನಿಜವಾದ ಪ್ರೀತಿಯೋ
ನಿರಂಕುಂಶವೇ ನಿಜವಾದ ಅರ‍್ತವೋ
ಜೀವನಕೆ ನೆರಳು ಅನಿವಾರ‍್ಯವೋ
ನೆರಳಿಗೆ ಜೀವನ ಅನಿವಾರ‍್ಯವೋ

(ಚಿತ್ರಸೆಲೆ: marcandangel.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications