ನವರಾತ್ರಿಯ ದಿನಗಳಲ್ಲಿ ಮಾಡುವ ಸಿಹಿ – ಹಯಗ್ರೀವ

– ಸವಿತಾ.

ಹಯಗ್ರೀವ, ಸಿಹಿ, ತಿಂಡಿ, sweet, hayagreeva

ಏನೇನು ಬೇಕು?

  • 1 ಬಟ್ಟಲು ಕಡಲೆಬೇಳೆ
  • 1/2  ಬಟ್ಟಲು ಒಣ ಕೊಬ್ಬರಿ ತುರಿ
  • 1/2  ಬಟ್ಟಲು ಬೆಲ್ಲ
  • 2 ಚಮಚ ಗಸಗಸೆ
  • 2 ಏಲಕ್ಕಿ
  • 2 ಲವಂಗ
  • 4 ಚಮಚ ತುಪ್ಪ

ಮಾಡುವ ಬಗೆ

  • ಕಡಲೆಬೇಳೆ ಸ್ವಲ್ಪ ಹುರಿದು 2 ಬಟ್ಟಲು ನೀರು ಹಾಕಿ ಕುಕ್ಕರ್ ನಲ್ಲಿ 4-5 ಶಿಳ್ಳೆ ಬರುವವರೆಗೆ ಕುದಿಸಿರಿ. ಬೇಳೆ ಚೆನ್ನಾಗಿ ಕುದಿಬೇಕು.
  • ಒಣ ಕೊಬ್ಬರಿ ತುರಿ, ಗಸಗಸೆ, ಏಲಕ್ಕಿ, ಲವಂಗ ಚೆನ್ನಾಗಿ ಹುರಿದು, ಆರಿದ ನಂತರ ಮಿಕ್ಸರ್ ನಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ.
  • ಒಂದು ಬಾಣಲೆಯಲ್ಲಿ ಎರಡು ಚಮಚ ತುಪ್ಪ ಬಿಸಿ ಮಾಡಿ ಅದರಲ್ಲಿ ಗೋಡಂಬಿ, ಒಣ ದ್ರಾಕ್ಶಿ ಸ್ವಲ್ಪ ಹುರಿದು, ನಂತರ ಬೆಲ್ಲ ಸೇರಿಸಿ ಮತ್ತು ಕುದಿಸಿದ ಬೇಳೆ ಸುರಿಯಿರಿ.
  • ಕಟ್ಟಿಗೆ ಚಮಚ ದಿಂದ ಕಡಲೆಬೇಳೆ ಮುಗುಚಬೇಕು/ಮಸೆಯಬೇಕು
  • ಒಣ ಕೊಬ್ಬರಿ ತುರಿ, ಗಸಗಸೆ ಏಲಕ್ಕಿ ಲವಂಗ ಪುಡಿ ಸೇರಿಸಿ.
  • ಮೇಲೆ 2 ಚಮಚ ತುಪ್ಪ ಹಾಕಿ ಒಂದು ಕುದಿ ಕುದಿಸಿ ಇಳಿಸಿ.

ರುಚಿಯಾದ ಹಯಗ್ರೀವ ಈಗ ಸವಿಯಿರಿ 🙂

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: