ಚುಟುಕು ಕವಿತೆಗಳು

ಕೆ. ಎಂ. ವಿರುಪಾಕ್ಶಯ್ಯ.

ಮ್ರುಶ್ಟಾನ್ನ ಬೋಜನವುಂಟು, ಹಸಿವಿಲ್ಲ
ಸಂಬಂದಗಳುಂಟು, ಸಮಯವಿಲ್ಲ
ನಗುವ ಮನಸ್ಸುಂಟು, ನಗುವಿಲ್ಲ
ಆಸ್ತಿ ಐಶ್ವರ‍್ಯಗಳುಂಟು, ಸಂತೋಶವಿಲ್ಲ
ಬದುಕುಂಟು, ಬದುಕಿನ ಅರ‍್ತವೇ ಗೊತ್ತಿಲ್ಲ

***

ನಡೆದಾಡುವ ಚಪ್ಪಲಿಯ ಮನೆಯೊಳಗೆ ಬಿಡುವಿರಿ
ಜಾತಿಯ ನೆಪದಲಿ ಮನುಜನ ಹೊರಗಿಡುವಿರಿ
ಕಳ್ಳನಾದರೂ ಬೆಕ್ಕಿಗೆ ಹಾಲ ಸುರಿಯುವಿರಿ
ಮನೆಯ ಕಾಯ್ವ ನಾಯಿಗೆ ಹಳಸಿದ ಅನ್ನವ ಹಾಕುವಿರಿ
ನಿಮ್ಮ ವ್ಯಕ್ತಿತ್ವಗಳಿಂದ ಇನ್ನೇನು ಬದಲಾಗಬಲ್ಲಿರಿ

***

ನರಿಯ ಮುಕವ ನೋಡಿ ಶುಬ ಶಕುನವೆನ್ನುವಿರಿ
ಹಲ್ಲಿ ಮೈಮೇಲೆ ಬಿದ್ದೊಡೆ ಅಪಶಕುನವೆನ್ನುವಿರಿ
ಹಾಲುಣಿಸಿ ಬೆಳಿಸಿದ ಬೆಕ್ಕು ಅಡ್ಡ ಬಂದೊಡೆ ನಿಲ್ಲುವಿರಿ
ನಿಮ್ಮ ಮೂಡನಂಬಿಕೆಗಳಿಂದ ಇನ್ನೇನು ಗೆಲ್ಲುವಿರಿ?

***

ಗೋರಿಯ ಮೇಲೆಯೇ ಮನೆಯ ಕಟ್ಟಬಲ್ಲಿರಿ
ಸ್ಮಶಾನದಲ್ಲಿ ದೇವಸ್ತಾನವಿದ್ದರೆ ಹೋಗಬಲ್ಲಿರಿ
ಮೋರಿಯ ನೀರನ್ನು ಸೋಸಿ ಕುಡಿಯಬಲ್ಲಿರಿ
ಪ್ರಾಣಿಗಳ ಕೂಗಿಗೆ ಅಪಶಕುನವೆನ್ನುವಿರಿ
ನಿಮ್ಮ ಮೂಡನಂಬಿಕೆಗಳಿಂದ ದೂರವಿದ್ದು ಬದುಕಬಲ್ಲರೇ?

***

ಜೀವನ ಒಂದು ವ್ಯಸನದ ಸಂತೆ
ಸಂಸಾರ ಸಂಬಂದವೇ ವರ‍್ತಕರಂತೆ
ದುಶ್ಚಟಗಳು ತರಕಾರಿಗಳಂತೆ
ಬೆಲೆಗಳು ಮರಣಕ್ಕೆ ಬಾಯ್ತೆರದಂತೆ

( ಚಿತ್ರಸೆಲೆ : professionalstudies.educ.queensu.ca )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: