ಒಗ್ಗರಣೆ ಮಜ್ಜಿಗೆ
– ಸವಿತಾ.
ಏನೇನು ಬೇಕು?
- 2 ಲೋಟ ಮಜ್ಜಿಗೆ
- 2 ಚಮಚ ಎಣ್ಣೆ
- 1/2 ಚಮಚ ಸಾಸಿವೆ
- 1/2 ಚಮಚ ಜೀರಿಗೆ
- 5-6 ಕರಿಬೇವು ಎಸಳು
- 1/4 ಚಮಚ ಇಂಗು
- ಸ್ವಲ್ಪ ಅರಿಶಿಣ
- ಹಸಿ ಶುಂಟಿ
- ಹಸಿ ಮೆಣಸಿನಕಾಯಿ ಪೇಸ್ಟ್ (1/4 ಇಂಚು ಹಸಿ ಶುಂಟಿ + 1 ಹಸಿ ಮೆಣಸಿನಕಾಯಿ)
- ಸ್ವಲ್ಪ ಕೊತ್ತಂಬರಿ ಸೊಪ್ಪು
ಮಾಡುವ ಬಗೆ
- ಎಣ್ಣೆ ಬಿಸಿ ಮಾಡಿ, ಸಾಸಿವೆ ಜೀರಿಗೆ ಸಿಡಿಸಿ ನಂತರ ಕರಿಬೇವು ಹಾಕಿ ಒಗ್ಗರಣೆ ಕೊಡಿ
- ಹಸಿ ಶುಂಟಿ ಹಸಿ ಮೆಣಸಿನಕಾಯಿ ಪೇಸ್ಟ್, ಅರಿಶಿಣ, ಇಂಗು, ಉಪ್ಪು ಹಾಕಿ ಹುರಿದು ಆರಿಸಿ
- ಸ್ವಲ್ಪ ತಣ್ಣಗಾದ ಮೇಲೆ ಮಜ್ಜಿಗೆಗೆ ಸೇರಿಸಿ.
- ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಮೇಲೆ ಹಾಕಿ.
ಒಗ್ಗರಣೆ ಮಜ್ಜಿಗೆ ಸವಿಯಲು ತಯಾರು. ಅನ್ನದ ಜೊತೆಗೂ ತೆಗೆದುಕೊಳ್ಳಬಹುದು.
ಇತ್ತೀಚಿನ ಅನಿಸಿಕೆಗಳು