ಬೇಸಿಗೆಗೆ ತಂಪಾದ ಹದ ಮಜ್ಜಿಗೆ

ಸವಿತಾ.

ಹದ ಮಜ್ಜಿಗೆ

ಏನೇನು ಬೇಕು?

  • 1 ಲೋಟ ಮೊಸರು
  • 2 ಲೋಟ ನೀರು
  • 1 ಅತವಾ 2 ಹಸಿ ಮೆಣಸಿನಕಾಯಿ
  • ಕಾಲು ಇಂಚು ಹಸಿ ಶುಂಟಿ
  • ಕಾಲು ಚಮಚ ಜೀರಿಗೆ
  • ಉಪ್ಪು ರುಚಿಗೆ ತಕ್ಕಶ್ಟು
  • ಸ್ವಲ್ಪ ಕೊತ್ತಂಬರಿ ಸೊಪ್ಪು

ಮಾಡುವ ಬಗೆ

ಮೊಸರು ನೀರು ಸೇರಿಸಿ ಮಜ್ಜಿಗೆ ಮಾಡಿ ಇಟ್ಟುಕೊಳ್ಳಿ. ಹಸಿ ಮೆಣಸಿನಕಾಯಿ, ಸ್ವಲ್ಪ ಹಸಿ ಶುಂಟಿ, ಜೀರಿಗೆ, ಉಪ್ಪು – ಎಲ್ಲವನ್ನೂ ಕುಟ್ಟಿ ಮಜ್ಜಿಗೆಗೆ ಸೇರಿಸಿ . ಕೊತ್ತಂಬರಿ ಸೊಪ್ಪು ಕತ್ತರಿಸಿ ಮೇಲೆ ಹಾಕಿ.

ಮಜ್ಜಿಗೆಯು ಹೆಚ್ಚು ತಂಪಾಗಿರಬೇಕೆಂದರೆ ಮಜ್ಜಿಗೆಗೆ ಒಂದು ಐಸ್ ಕ್ಯೂಬ್ ಹಾಕಬಹುದು. ಮಜ್ಜಿಗೆ ಆರೋಗ್ಯಕ್ಕೆ ಹಿತ

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: