ಮಾಡಿ ಸವಿಯಿರಿ ಗರಿಗರಿ ಚಕ್ಕುಲಿ

– ಸವಿತಾ.

ಚಕ್ಕುಲಿ, chakkuli

ಬೇಕಾಗುವ ಸಾಮಾನುಗಳು

 • ಅಕ್ಕಿ – 1 ಕಿಲೋ
 • ಕಡಲೆಬೇಳೆ – 1 ಬಟ್ಟಲು
 • ಉದ್ದಿನ ಬೇಳೆ – 1 ಬಟ್ಟಲು
 • ಹುರಿಗಡಲೆ- 1/2 ಬಟ್ಟಲು
 • ಎಳ್ಳು – 1/2 ಚಮಚ
 • ಓಂ ಕಾಳು – 1/2 ಚಮಚ
 • ಜೀರಿಗೆ – 1/2 ಚಮಚ
 • ಒಣ ಕಾರ – 1 ಚಮಚ
 • ಅರಿಶಿಣ – ಸ್ವಲ್ಪ
 • ಉಪ್ಪು – ರುಚಿಗೆ ತಕ್ಕಶ್ಟು
 • ಅಡುಗೆ ಸೋಡಾ – ಸ್ವಲ್ಪ
 • ಎಣ್ಣೆ – ಚಕ್ಕುಲಿ ಕರಿಯಲು

ಚಕ್ಕುಲಿ ಹಿಟ್ಟು ಮಾಡುವ ಬಗೆ

ಅಕ್ಕಿ ತೊಳೆದು ಎರಡು ದಿನ ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಳ್ಳಿ. ಕಡಲೆಬೇಳೆ ಮತ್ತು ಉದ್ದಿನಬೇಳೆ ಬೇರೆ ಬೇರೆಯಾಗಿ ಹುರಿದು, ನಂತರ ಅಕ್ಕಿ ಜೊತೆ ಸೇರಿಸಿ ಗಿರಣಿಯಲ್ಲಿ ಹಿಟ್ಟು ಮಾಡಿಸಿ ಇಟ್ಟುಕೊಳ್ಳಿ.

ಚಕ್ಕುಲಿ ಮಾಡುವ ವಿದಾನ

ಹುರಿಗಡಲೆಯನ್ನು ಮಿಕ್ಸರ್‌ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಇದಕ್ಕೆ ಒಂದು ಬಟ್ಟಲು ಚಕ್ಕುಲಿ ಹಿಟ್ಟು, ಎಳ್ಳು, ಓಂ ಕಾಳು, ಜೀರಿಗೆ, ಒಣ ಕಾರ, ಸ್ವಲ್ಪ ಉಪ್ಪು, ಚಿಟಿಕೆ ಅರಿಶಿಣ, ಸ್ವಲ್ಪ ಅಡುಗೆ ಸೋಡಾ, ಒಂದು ಚಮಚ ಕಾಯಿಸಿದ ಎಣ್ಣೆ ಮತ್ತು ಸ್ವಲ್ಪ ನೀರು ಸೇರಿಸಿ ಕಲಸಿ. ಇದನ್ನು ಚಪಾತಿ ಹಿಟ್ಟಿನ ಹದಕ್ಕೆ ನಾದಿ ಇಟ್ಟುಕೊಳ್ಳಿ.

ಕಲಸಿಟ್ಟುಕೊಂಡ ಹಿಟ್ಟನ್ನು ಅರ‍್ದ ಗಂಟೆ ಬಿಟ್ಟು ಇನ್ನೊಮ್ಮೆ ನಾದಿಕೊಳ್ಳಿ. ಚಕ್ಕುಲಿ ಒರಳಿಗೆ ಸ್ವಲ್ಪ ನೀರು ಹಚ್ಚಿ, ಹಿಟ್ಟು ಹಾಕಿಕೊಂಡು ಕಾದ ಎಣ್ಣೆಯಲ್ಲಿ ಚಕ್ಕುಲಿ ಬಿಡಿ. ಕಂದುಗೆಂಪು ಬಣ್ಣಕ್ಕೆ ತಿರುಗುತ್ತಿದ್ದಂತೆ ತೆಗೆಯಿರಿ. ಗರಿಗರಿಯಾದ ಅಕ್ಕಿ ಹಿಟ್ಟಿನ ಚಕ್ಕುಲಿ ಸವಿಯಲಿ ತಯಾರು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: