ಕವಿತೆ: ಮದುರ‍ ಗಾನ ಪಯಣ

– ಸಂದೀಪ ಔದಿ.

lovers, ಒಲವು

ನನಗಿಂತ ಮುಂಚೆ ಹೋಗಿ ತಲುಪಿರ‍ುವೆಯಲ್ಲೆ ಪ್ರ‍ೀತಿಯ ನಿಲ್ದಾಣ
ಮರ‍ಳಿ ಬಾ ಕಳೆದುಕೊಳ್ಳದಿರ‍ು ಈ ಮದುರ‍ ಗಾನ ಪಯಣ

ದಾರಿಯುದ್ದಕ್ಕೂ ಹೊಸ ಆಸೆಗಳ ನಾಮಪಲಕಗಳಿಲ್ಲಿ
ಹೊಸಬಾವ ತುಂತುರ‍ು ಹೇಳದೆ ಕೇಳದೆ ಇಲ್ಲಿ

ಹಿಡಿದಿರ‍ು ಕೈ ಬೆರ‍ಳ ನಡೆವಾಗ ಹಾದಿಯಲಿ
ಬೇಜಾರ‍ು ಪದವ ಬಿಡೋಣ ಪಾತಾಳದಲಿ

ಹೊಸತೊಂದು ಸಂಬಾಶಣೆ ಶುರ‍ು ಮಾಡೋಣ ಯಾರೂ ಇಲ್ಲದೆಡೆಯಲಿ
ಬೆರೆಯಲು ಅವಕಾಶ ಮಾಡಿಕೊಡೋಣ ಒಲವ ಹ್ರುದಯದಲಿ

ಮನುಕುಲದ ನಿಯಮಗಳ ಗಾಳಿಗೆ ತೂರಿ
ಮನಬಂದಂತೆ ಪ್ರ‍ೀತಿ ಹಾಡಿಗೆ ತಾಳ ಹಾಕಿ

ಆಗಾಗ ಸುಮ್ಮನೆ ಹುಸಿ ಮುನಿಸ ಹಂಚಿಕೊಳ್ಳೋಣ
ಮರ‍ುಕ್ಶಣವೇ ಹೊಟ್ಟೆ ಹುಣ್ಣಾಗುವ ಹಾಗೆ ನಕ್ಕುಬಿಡೋಣ

ನನಗಿಂತ ಮುಂಚೆ ಹೋಗಿ ತಲುಪಿರ‍ುವೆಯಲ್ಲೆ ಪ್ರ‍ೀತಿಯ ನಿಲ್ದಾಣ
ಮರ‍ಳಿ ಬಾ ಕಳೆದುಕೊಳ್ಳದಿರ‍ು ಈ ಮದುರ‍ ಗಾನ ಪಯಣ

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *