ಕವಿತೆ: ಜೊಳ್ಳು ಜೀವನ

– ವೆಂಕಟೇಶ ಚಾಗಿ.

life, ಬದುಕು

ಮನದ ಕಡಲೊಳಗೆ ಬತ್ತಿದೆ ಸಂಸ್ಕಾರ
ಕಲ್ಲೆದೆಗಳು ಇಲ್ಲಿ ಬೆಳೆದಿವೆ ಅಪಾರ
ಸುತ್ತ ಗೋಡೆಯ ಕಟ್ಟಿ ಬೆಟ್ಟದ ತೂಕವನು ಹೊತ್ತು
ಪರಿತಪಿಸಿದೆ ಬೇಯುತಿದೆ ಮನದ ಪ್ರಾಕಾರ

ತುಸು ಕಾಳು ಕಂಡ ಕಣ್ಣುಗಳು ಮರೆತಿವೆ
ಸದಾ ಜಿನುಗುವ ಕಣ್ಣುಗಳ ಹಸಿವನ್ನು
ಮತ್ತೆ ಮತ್ತೆ ಅದೇ ಕೊರೆತ ಅದೇ ಮೊರೆತ
ಆಳದಿಂದಾಳವ ಸೇರುವೆಡೆಗೆ ಸಂಸ್ಕಾರ

ಆಕಾರ ಪ್ರಾಕಾರಗಳೆಲ್ಲ ಈಗ ವಿಕಾರ
ನಿಯಮ ನೀತಿಗಳ ಜೊಲ್ಲು ಬೀಕರ
ಹುಡಿ ಮಣ್ಣು ಮೆಟ್ಟಿದ ಪಾದ ಕಂಡಿದೆ
ಪಾಪ ನರಕದಿ ನರಳಿ ಮಡಿದ ಸಂಸ್ಕಾರ

ಬಿಟ್ಟು ಬಿಡದೆ ದುಡಿಯುತಿಹ ದೈವ
ಕೊಟ್ಟು ಮರೆತಿಹ ಸುಟ್ಟಿರುವ ಸಂಸ್ಕಾರ
ಅವನೊಟ್ಟಿಗಿಲ್ಲ ಹಿಟ್ಟಿಲ್ಲ ಬೆನ್ನಿಗಿಲ್ಲ
ಇಲ್ಲಿ ಕೇಳಿದವರಿಲ್ಲ ಬೇಕೆ ಸಹಕಾರ

ನಾಲಿಗೆ ಹರಿದು ಎರಡಾಗಿ ಬಿದ್ದ ಪದಗಳು
ನಂಬಿಕೆಯ ನಗರವನ್ನೇ ನಾಶವಾದ ನರಕವಾಗಿ
ಪುಟ್ಟ ಜೀವಿಗಳ ಬೆಟ್ಟದಾಸೆಗೆ ಕಿಚ್ಚಿಟ್ಟು
ಸ್ವಾಹ ಸಂಸ್ಕ್ರುತಿಯೊಳಗೆ ಕಳೆದಿದೆ ಸಂಸ್ಕಾರ

(ಚಿತ್ರ ಸೆಲೆ: theunboundedspirit.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: