ಮಾವಿನಕಾಯಿ ಉಪ್ಪಿನಕಾಯಿ

–  ಸವಿತಾ.mango pickle, ಮಾವಿನಕಾಯಿ ಉಪ್ಪಿನಕಾಯಿ

ಏನೇನು ಬೇಕು?

  • ಮಾವಿನಕಾಯಿ – 2
  • ಒಣ ಕಾರದ ಪುಡಿ – 3 ಚಮಚ
  • ಉಪ್ಪು – 4 ಚಮಚ
  • ಸಾಸಿವೆ ಪುಡಿ – 1 ಚಮಚ
  • ಮೆಂತೆ ಪುಡಿ – 1 ಚಮಚ
  • ಇಂಗು – 1/2 ಚಮಚ
  • ಬೆಳ್ಳುಳ್ಳಿ – 4 ಗಡ್ಡೆ
  • ಎಣ್ಣೆ – 4 ಚಮಚ
  • ಅರಿಶಿಣ – 1 ಚಮಚ

ಮಾಡುವ ವಿದಾನ

ಮಾವಿನಕಾಯಿ ತೊಳೆದು, ಬಟ್ಟೆಯಿಂದ ಒರೆಸಿ ಕತ್ತರಿಸಿ ಇಟ್ಟುಕೊಳ್ಳಿ. ಸಾಸಿವೆ, ಮೆಂತೆ ಕಾಳು ಮಿಕ್ಸರ್ ನಲ್ಲಿ ಪುಡಿ ಮಾಡಿ, ಹೆಚ್ಚಿದ ಮಾವಿನಕಾಯಿ ಹೋಳುಗಳಿಗೆ ಸೇರಿಸಿ. ಇಂಗು, ಉಪ್ಪು, ಅರಿಶಿಣ, ಒಣ ಕಾರದ ಪುಡಿ ಹಾಕಿ ಮಾವಿನಕಾಯಿ ಹೋಳುಗಳನ್ನು ಕಲಸಿ ಮಿಶ್ರಣ ಮಾಡಿಟ್ಟುಕೊಳ್ಳಿ. ಎಣ್ಣೆಯನ್ನು ಕಾಯಿಸಿ, ಬೆಳ್ಳುಳ್ಳಿಯನ್ನು ಬಿಡಿಸಿ, ಬೆಳ್ಳುಳ್ಳಿ ಎಸಳು ಹಾಕಿ ಸ್ವಲ್ಪ ಕರಿದು ಒಲೆ ಆರಿಸಿ, ಆರಲು ಬಿಡಿ. ಎಣ್ಣೆ ಆರಿದ ಮೇಲೆ ಮಾವಿನಕಾಯಿ ಹೋಳುಗಳನ್ನು ಮಿಶ್ರಣಕ್ಕೆ ಹಾಕಿ ತಿರುಗಿಸಿ. 3-4 ಬಾರಿ ಚೆನ್ನಾಗಿ ತಿರುಗಿಸಿ ಬಾಟಲಿಯಲ್ಲಿ ಹಾಕಿ ಇಟ್ಟುಕೊಳ್ಳಿ . ಸಿಹಿ ಬೇಕಾದರೆ ಇದಕ್ಕೆ ಎರಡು ಚಮಚ ಬೆಲ್ಲದ ಪುಡಿ ಸೇರಿಸಿ.

(ಚಿತ್ರ ಸೆಲೆ: ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: