ಕವಿತೆ: ಒಲವಿನ ನೆನಪು

– ಅಮರೇಶ ಎಂ ಕಂಬಳಿಹಾಳ.

love, ಒಲವು

ಕಣ್ಣ ಬಿಂದು ಜಾರಿ ಹೋಗಿ
ಕಡಲು ಉದಿಸಿದೆ
ಒಲವು ಒಂದು ನೆನಪು ಆಗಿ
ಒಡಲು ಕುದಿಸಿದೆ

ಜೀವ ಬಾವ ನೋವ ನುಂಗಿ
ಕೊರಗು ಕವಿದಿದೆ
ನೂರು ಕನಸು ಹರಿದು ಹೋಗಿ
ಬೆರಗು ತರಿಸಿದೆ

ಕುಡಿನೋಟದಲ್ಲಿ ತರತರದ ಊಟ
ತಂದು ಬಡಿಸಿದೆ
ಕೋಲ್ಮಿಂಚು ಹೊಡೆಸಿ ತಬ್ಬಿಬ್ಬುಗೊಳಿಸಿ
ಓಡೋಡಿ ಹೋಗಿದೆ

ಬಿರುಬಿಸಿಲಿನಲ್ಲಿ ಹನಿಹನಿಯ ಸುರಿಸಿ
ಮಳೆಬಿಲ್ಲು ಮೂಡಿದೆ
ಏಳು ಬಣ್ಣದೆಡೆ ಕಣ್ಣ ಸೆಳೆತ
ನೀನ್ಯಾವ ಬಣ್ಣ ತಿಳಿಯದಾಗಿದೆ

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: