ಕವಿತೆ: ನಲಿ ನಲಿದು ಕುಣಿದ ಆ ದಿನಗಳು
– ಸುರಬಿ ಲತಾ.
ನಲಿ ನಲಿದು ಕುಣಿದ ಆ ದಿನಗಳು
ಮತ್ತೇಕೋ ಇಂದು ನೆನಪಾದವು
ಕಳೆದು ಹೋದ ಬಾಲ್ಯವಂತೂ ಬರದು
ಸಿಹಿ ನೆನಪುಗಳಂತೂ ಮರೆಯದು
ಮದುವೆ ಮಕ್ಕಳು ಸಂಸಾರ
ನಲುಗಿದ ಮನಗಳಿಗೆ ಬೇಕಾಗಿದೆ
ಒಲವಿನ ಅಕ್ಕರೆ ಬೆರೆತ ಸಹಕಾರ
ಕರೆಯುವ ಮತ್ತೆ ವಸಂತಕಾಲ
ಅಲ್ಲಿ ನೀವು, ಇಲ್ಲಿ ನಾನಿರಲು
ಅಂತರವಿದ್ದರೇನು ನಡುವೆ
ಪ್ರೀತಿ, ವಾತ್ಸಲ್ಯಗಳಿಗೆ ಬರವೇ?
ಹರಿವ ನೀರಂತೆ ಸಾಗಲಿ ಒಲುಮೆ
ಅಕ್ಕ ತಂಗಿಯರು ಕೂಡಿ ಬೆರೆತೆವಂದು
ಬದುಕಿನ ಜಂಜಾಟದಲ್ಲಿ ಎಲ್ಲವೂ ಸಿಂದು
ಒಮ್ಮೆ ಸರಿಸಿಬಿಡುವ ಈ ದಿನಗಳನ್ನು
ಮತ್ತೆ ಹಾಡಿ ಕರೆಯುವ ಹೊಸ ಯುಗವನ್ನು
(ಚಿತ್ರ ಸೆಲೆ: maxpixel.net)
ಇತ್ತೀಚಿನ ಅನಿಸಿಕೆಗಳು