ಕೊತ್ತಂಬರಿ ಸೊಪ್ಪಿನ ಬಾತ್

ಬಾತ್, bath

ಏನೇನು ಬೇಕು?

ಒಂದು ಹಿಡಿ ಕೊತ್ತಂಬರಿ ಸೊಪ್ಪು
2 ಚಮಚ ಕಡ್ಲೆ ಬೇಳೆ
2 ಚಮಚ ಉದ್ದಿನ ಬೇಳೆ
2 ಚಮಚ ಸಾಸಿವೆ
5 ಹಸಿಮೆಣಸಿನಕಾಯಿ
ಇಂಗು
ಶುಂಟಿ
ಈರುಳ್ಳಿ
ಸ್ವಲ್ಪ ಕಾಯಿತುರಿ
ಎಣ್ಣೆ
ಸ್ವಲ್ಪ ನಿಂಬೆ ಹಣ್ಣಿನ ರಸ
ರುಚಿಗೆ ತಕ್ಕಶ್ಟು ಉಪ್ಪು

ಮಾಡುವ ಬಗೆ

ಮೊದಲು ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಕತ್ತರಿಸಿ ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ಅದರ ಜೊತೆಗೆ ಮೇಲೆ ತಿಳಿಸಿದ ಅಳತೆಯಲ್ಲಿ, ಅವನ್ನ ಹುರಿಯದೆ ಹಾಗೆಯೇ, ಹಸಿ ಸಾಸಿವೆ, ಹಸಿಮೆಣಸಿನಕಾಯಿ, ಇಂಗು, ಕಾಯಿತುರಿ, ಶುಂಟಿ, ಸ್ವಲ್ಪ ನೀರನ್ನು ಹಾಕಿ ರುಬ್ಬಿಕೊಳ್ಳಿ. ಆನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಉದ್ದಿನ ಬೇಳೆ, ಕಡ್ಲೆಬೇಳೆ, ಇಂಗು ಹಾಕಿ ಹುರಿದ ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಕಂದುಬಣ್ಣ ಬರುವವರೆಗೆ ಸಣ್ಣ ಉರಿಯಲ್ಲಿ ಬಾಡಿಸಿ. ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಚೆನ್ನಾಗಿ ಪ್ರೈ ಮಾಡಿದ ಬಳಿಕ ಅದಕ್ಕೆ ಉದುರಾಗಿ ಮಾಡಿದ ಅನ್ನ, ಉಪ್ಪು, ಸ್ವಲ್ಪ ನಿಂಬೆಹಣ್ಣಿನ ರಸ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಆನಂತರ ತಯಾರಿಸಿದ ಕೊತ್ತಂಬರಿ ಸೊಪ್ಪಿನ ಬಾತನ್ನು ಸವಿಯಲು ನೀಡಿ.

(ಚಿತ್ರ ಸೆಲೆ: ಕಲ್ಪನಾ ಹೆಗಡೆ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: