ಕವಿತೆ : ನಮ್ಮ ಹೆಮ್ಮೆಯ ಇಮ್ಮಡಿ ಪುಲಿಕೇಶಿ

ಕಿರಣ್ ಮಲೆನಾಡು.

ಇಮ್ಮಡಿ‌ ಪುಲಿಕೇಶಿ, Immadi Pulikeshi

ಎಳವೆಯಲ್ಲಿ ಎರೆಯನಾಗಿ ಬೆಳೆದವನು
ಚಾಲುಕ್ಯರ ಅರಸನಾಗಿ ಪಟ್ಟವೇರಿದವನು
ಗುರ‍್ಜರ ಅರಸರನ್ನು ಸೋಲಿಸಿದವನು
ಕರ‍್ಣಾಟಬಲವೆಂಬ ಪಡೆಯನ್ನು ಕಟ್ಟಿದವನು
ರಾಜಾಪುರಿಯನ್ನು ಹಿಡಿತದಲ್ಲಿಟ್ಟುಕೊಂಡವನು
ನರ‍್ಮದೆ ತೀರದಲ್ಲಿ ಹರ‍್ಶನನ್ನು ಸೆದೆಬಡಿದವನು
ಆನೆ, ಕುದುರೆ, ಆಳು, ಹಡಗು ಪಡೆಗಳೊಡೆಯನು
ಮಾಳ್ವ, ಲಾಟ ಮತ್ತು ಕಳಿಂಗವನ್ನು ಗೆದ್ದವನು
ತೆಂಕಣ ಕೋಸಲವನ್ನು ತನ್ನದಾಗಿಸಿಕೊಂಡವನು
ಕಾಂಚಿಯ ಪಲ್ಲವರಿಗೆ ಸೋಲುಣಿಸಿದವನು
ವೆಂಗಿ‌ಯ ಚಾಲುಕ್ಯರನ್ನು ಬೆಳೆಸಿದವನು
ಹಗೆಗಾರರನ್ನು ಕೆಚ್ಚಿನಿಂದ ಹಿಮ್ಮೆಟ್ಟಿಸಿದವನು
ಪರ‍್ಶಿಯಾದೊಡನೆ ನಂಟು ಬೆಳೆಸಿದವನು
ಹ್ಯೂಯೆನ್ ತ್ಸಾಂಗನಿಂದ ಹೊಗಳಲ್ಪಟ್ಟವನು
ತೊಂಬತ್ತೊಂಬತ್ತು ಸಾಸಿರ ಹಳ್ಳಿಗಳೊಡೆಯನು
ಸತ್ಯಾಶ್ರಯ, ಪರಮೇಶ್ವರ, ದಕ್ಶಿಣಾಪತೇಶ್ವರನಿವನು
ಕನ್ನಡ ನಾಡಿನ ಎಲ್ಲೆಯನ್ನು ಹಿಗ್ಗಿಸಿದವನು
ಕನ್ನಡ ನಾಡಿನ ಎಂಟೆದೆಯ ಬಂಟನಿವನು
ಅವನೇ ಅವನೇ ಕನ್ನಡಿಗರ ನಲ್ಮೆಯ, ಹೆಮ್ಮೆಯ,
ಕೆಚ್ಚೆದೆಯ‌ ಇಮ್ಮಡಿ‌ ಪುಲಿಕೇಶಿ

( ಚಿತ್ರಸೆಲೆ : commons.wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: