ಅವಲಕ್ಕಿ ಪಂಚ ಕಜ್ಜಾಯ

– ಸವಿತಾ.

avalakki pancha kajjaya, ಅವಲಕ್ಕಿ ಪಂಚ ಕಜ್ಜಾಯ

ಬೇಕಾಗುವ ಸಾಮಾನುಗಳು

  • ಅವಲಕ್ಕಿ – 2 ಬಟ್ಟಲು
  • ಬೆಲ್ಲದ ಪುಡಿ – 1 ಬಟ್ಟಲು
  • ಹಸಿ ಕೊಬ್ಬರಿ ತುರಿ – 1 ಬಟ್ಟಲು
  • ಏಲಕ್ಕಿ – 2
  • ತುಪ್ಪ – 6 ಚಮಚ
  • ಒಣ ದ್ರಾಕ್ಶಿ – ಸ್ವಲ್ಪ
  • ಗೋಡಂಬಿ – ಸ್ವಲ್ಪ

ಮಾಡುವ ಬಗೆ

ಮೂರು ಚಮಚ ತುಪ್ಪ ಹಾಕಿ ಅವಲಕ್ಕಿ ಹುರಿದು ತೆಗೆಯಿರಿ. ಆರಿದ ನಂತರ ಮಿಕ್ಸರ್ ನಲ್ಲಿ ಒಂದು ಸುತ್ತು ತಿರುಗಿಸಿ ಇಟ್ಟುಕೊಳ್ಳಿ. ಮೂರು ಚಮಚ ತುಪ್ಪ ಬಾಣಲೆಗೆ ಹಾಕಿ ಬಿಸಿ ಮಾಡಿ. ಗೋಡಂಬಿ, ಒಣ ದ್ರಾಕ್ಶಿ ಹುರಿದು ತೆಗೆದಿಡಿ.

ಬಾಣಲೆಗೆ ಬೆಲ್ಲ ಮತ್ತು ಎರಡು ಚಮಚ ನೀರು ಸೇರಿಸಿ ಬೆಲ್ಲಕರಗಿಸಿ. ನಂತರ ಹಸಿ ಕೊಬ್ಬರಿ ತುರಿ ಸೇರಿಸಿ ಸ್ವಲ್ಪ ಕೈಯಾಡಿಸಿ. ಆಮೇಲೆ ಅವಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ತಿರುವಿ, ಸ್ವಲ್ಪ ಹುರಿಯಿರಿ. ಏಲಕ್ಕಿ ಪುಡಿ ಮಾಡಿ ಸೇರಿಸಿ, ಒಲೆ ಆರಿಸಿ.

ಈಗ ದೇವರ ನೈವೇದ್ಯ ಅವಲಕ್ಕಿ ಪಂಚ ಕಜ್ಜಾಯ ಸಿದ್ದ. ಎಲ್ಲರಿಗೂ ಹಂಚಿ ತಿನ್ನಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: