ಕವಿತೆ: ಗೆಳೆತನ

– ಶ್ಯಾಮಲಶ್ರೀ.ಕೆ.ಎಸ್.

ಮೊಗಕೆ ನಗು ಚೆಲ್ಲುವ
ಮನಕೆ ಮುದ ನೀಡುವ
ಬಣ್ಣಿಸಲಾಗದ ಬಂದನ
ಬದುಕಿನ ಅದ್ಬುತ ಗೆಳೆತನ

ಜಗವ ಮರೆಸಿ
ದುಕ್ಕವ ನೀಗಿಸಿ
ಹರುಶವ ನೀಡುವ ಸಂಕೋಲೆ
ಕಟ್ಟಲಾಗದು ಬೆಲೆ

ವರ‍್ಣಗಳ ಚೇದಿಸುವ
ಬಾಶೆಗಳ ಬೆರೆಸುವ
ಚಿಮ್ಮುವ ಆನಂದದ ಒರತೆ
ಶುದ್ದ ಸ್ನೇಹಿತರ ಸ್ನೇಹಪರತೆ

ಬಾಲ್ಯವ ನೆನಪಿಸಿ
ತುಂಟಾಟವ ಹೊರಹೊಮ್ಮಿಸಿ
ವಯಸ್ಸಿನ ಮಿತಿ ತೋರದು
ಸ್ವಚ್ಚ ಬಾವಗಳ ಮೈತ್ರಿಯದು

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: