ಕುರುಕಲು ತಿನಿಸು ಪ್ರಿಯರಿಗೆ : ನಿಪ್ಪಟ್ಟು

ಸವಿತಾ.

ನಿಪ್ಪಟ್ಟು, nippattu

ಬೇಕಾಗುವ ಪದಾರ‍್ತಗಳು

 • ಅಕ್ಕಿಹಿಟ್ಟು – 1 ಲೋಟ
 • ಮೈದಾಹಿಟ್ಟು – 1/4 ಲೋಟ
 • ಚಿರೋಟಿ ರವೆ – 1/4 ಲೋಟ
 • ಹಸಿಕೊಬ್ಬರಿ ತುರಿ – 3 ಚಮಚ
 • ಜೀರಿಗೆ – 1/4 ಚಮಚ
 • ಓಂ ಕಾಳು – 1/4 ಚಮಚ
 • ಒಣ ಕಾರದ ಪುಡಿ – 1 ಚಮಚ
 • ಉಪ್ಪು ರುಚಿಗೆ ತಕ್ಕಶ್ಟು
 • ಕಾದ ಎಣ್ಣೆ – 2 ಚಮಚ
 • ಕಡಲೆ ಬೀಜ (ಶೇಂಗಾ) – 1/4 ಲೋಟ
 • ಹುರಿಗಡಲೆ ( ಪುಟಾಣಿ ) – 1/4 ಲೋಟ
 • ಬಿಳಿ ಎಳ್ಳು – 1 ಚಮಚ
 • ಇಂಗು – ಒಂದು ಚಿಟಿಕೆ
 • ಕರಿಬೇವು – 20 ಎಲೆ

ಮಾಡುವ ಬಗೆ

ಕಡಲೆ ಬೀಜ ಹುರಿದು ಆರಲು ಬಿಡಿ. ಎಳ್ಳು ಹುರಿದು ಆರಲು ಬಿಡಿ. ಕರಿಬೇವು ಸ್ವಲ್ಪ ಹುರಿದು ನಂತರ ಇವುಗಳ ಜೊತೆ ಕೊಬ್ಬರಿ ತುರಿ, ಹುರಿಗಡಲೆ, ಉಪ್ಪು, ಒಣ ಕಾರದ ಪುಡಿ ಜೀರಿಗೆ, ಓಂ ಕಾಳು ಸೇರಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಅಕ್ಕಿ ಹಿಟ್ಟು, ಮೈದಾ ಹಿಟ್ಟು ಮತ್ತು ಚಿರೋಟಿ ರವೆ ಮತ್ತು ಈ ಪುಡಿ ಸೇರಿಸಿ ಚೆನ್ನಾಗಿ ಕಲಸಿ.

ಇಂಗು ಮತ್ತು ಕಾದ ಎಣ್ಣೆ, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಗಟ್ಟಿಯಾಗಿ ಕಲಸಿ ಇಟ್ಟುಕೊಳ್ಳಿ. ಚಪಾತಿಯ ಹದಕ್ಕೆ ಕಲಸಿಕೊಳ್ಳಿ. ಚಪಾತಿಯ ಹಾಗೇ ಲಟ್ಟಿಸಿ ಒಂದು ಸ್ಟೀಲ್ ಮುಚ್ಚಳದಿಂದ ಕತ್ತರಿಸಿ ದುಂಡನೆಯ ಆಕಾರ ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ.

ಈಗ ಗರಿ ಗರಿಯಾದ ನಿಪ್ಪಟ್ಟು ಸವಿಯಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: