ಕವಿತೆ: ಗೀಚುವುದು ಮನ

– .

ಏನು ಹುಚ್ಚು ಮನವೋ ಇದು
ಗೀಚುವುದು ಒಮ್ಮೆ ಹಾಗೆಂದು, ಒಮ್ಮೆ ಹೀಗೆಂದು
ಅಂಕೆಯಿಲ್ಲದ ಮಂಗನಂಗೆ
ಎತ್ತಲಿಂದೆತ್ತಲೋ ಮತ್ತೆಲ್ಲಿಂದೆತ್ತಲೋ

ಮೊದಲು ಕನಸಾಗಿ
ನಂತರ ಹವ್ಯಾಸವಾಗಿ
ಮತ್ತೆ ಹುಚ್ಚಾಗಿ
ಇನ್ನೂ ಹೆಚ್ಚಾಗಿ
ಗೀಚುವುದು ಒಮ್ಮೆ ಹಾಗೆಂದು, ಒಮ್ಮೆ ಹೀಗೆಂದು

ಆಕಾರವಿಲ್ಲ
ಆಚಾರವಿಲ್ಲ
ಮನಬಂದಂತೆ
ಹುಚ್ಚು ಹೆಚ್ಚಾದಂತೆ
ಗೀಚುವುದು ಒಮ್ಮೆ ಹಾಗೆಂದು, ಒಮ್ಮೆ ಹೀಗೆಂದು

ಯಾರು ಓದುವರೋ
ಯಾರು ಬಿಡುವರೋ
ಯಾರೇನು ಮಾಡುವರೊ
ನಾನಂತು ಗೀಚುವೆನು
ಮನಪೇಳ್ದಂತೆ
ಒಮ್ಮೆ ಹಾಗೆಂದು, ಒಮ್ಮೆ ಹೀಗೆಂದು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: