ಕವಿತೆ: ಕರ‍್ಮಯೋಗಿ ರೈತರು

– ಶ್ಯಾಮಲಶ್ರೀ.ಕೆ.ಎಸ್.

 

ಮಳೆ ಇರಲಿ, ಚಳಿ ಇರಲಿ
ಕಾಯಕವ ಬಿಡರು

ಬೇಸಿಗೆಯ ಬಿರು ಬಿಸಿಲಿನಲೂ
ಬೆವರು ಹರಿಸುವ ಶ್ರಮಿಕರು

ಹಸಿವು ದಾಹಗಳ ಮರೆತು
ಕೆಸರಿನಲ್ಲಿ ಕಾರ‍್ಯನಿರತರು

ಗಾಳಿ ಬಿರುಗಾಳಿಗೂ ಮಣಿಯದೇ
ಕ್ರುಶಿಯಲ್ಲಿ ತೊಡಗಿಹರು

ದೇಹ ದಣಿಸಿ ಬೂತಾಯಿಯ
ಸೇವೆಗೈವ  ದರಣಿಸುತರು

ಹಸಿರು ನಂಬಿ ಉಸಿರಾಡುತ್ತಿರುವ
ಕರ‍್ಮಯೋಗಿ ರೈತರು

ಮನುಕುಲದ ಹಸಿವು
ನೀಗುತಿರುವ ಅನ್ನದಾತರು

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: