ತರಕಾರಿ ಪಲಾವ್

ಕಲ್ಪನಾ ಹೆಗಡೆ.

ತರಕಾರಿ ಪಲಾವ್, vegetable pulav

ಬೇಕಾಗುವ ಸಾಮಗ್ರಿಗಳು:

 • 2 ಪಾವು ಸೋನಾಮಸೂರಿ ಅಕ್ಕಿ
 • 2 ಕಪ್ ಬಟಾಣಿ
 • 3 ಕಪ್ ಹುರುಳಿಕಾಯಿ
 • 1 ಕಪ್ ಕ್ಯಾರೆಟ್
 • 1 ಆಲೂಗಡ್ಡೆ
 • 2 ಈರುಳ್ಳಿ
 • 2 ಟೊಮೇಟೊ
 • 10 ಗೋಡಂಬಿ
 • ಒಂದು ಕಟ್ಟು ಪುದಿನಾಸೊಪ್ಪು ಹಾಗೂ ಸ್ವಲ್ಪ ಕೊತ್ತಂಬರಿ ಸೊಪ್ಪು
 • ಸ್ವಲ್ಪ ಕಾಯಿತುರಿ
 • ಮಸಾಲೆ ಪದಾರ‍್ತಗಳು : 2 ಏಲಕ್ಕಿ, 2 ಚೆಕ್ಕೆ, 2 ಲವಂಗ, 2 ಮೊಗ್ಗು, 3 ದಾಲ್ಚಿನ್ನಿ ಎಲೆ, ಶುಂಟಿ ಪೇಸ್ಟ್

ಮಾಡುವ ಬಗೆ:

ಮೊದಲು ತರಕಾರಿಯನ್ನು ಹೆಚ್ಚಿಕೊಳ್ಳಬೇಕು. ಆನಂತರ ಮಿಕ್ಸಿ ಜಾರಿಗೆ ಕಾಯಿತುರಿ, ಚೆನ್ನಾಗಿ ತೊಳೆದ ಪುದಿನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಚೆಕ್ಕೆ, ಲವಂಗ, ಏಲಕ್ಕಿ, ಶುಂಟಿ ಪೇಸ್ಟ್, 1 ಹೆಚ್ಚಿದ ಈರುಳ್ಳಿ, 1 ಹೆಚ್ಚಿದ ಟೊಮೇಟೊ, ಹಾಕಿ ರುಬ್ಬಿಕೊಳ್ಳಬೇಕು. ಬಳಿಕ ಕುಕ್ಕರಿಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಚಿಟಿಕೆ ಸಾಸಿವೆ, ದಾಲ್ಚಿನ್ನಿ ಎಲೆ, ಒಂದು ಚೆಕ್ಕೆ, ಮೊಗ್ಗು, 10 ಗೋಡಂಬಿ, ಹೆಚ್ಚಿದ ಈರುಳ್ಳಿ ಟೊಮೇಟೊ ಹಾಕಿ ಪ್ರೈ ಮಾಡಿದ ಮೇಲೆ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಪ್ರೈ ಆದ ಬಳಿಕ ಅದಕ್ಕೆ ತೊಳೆದ ಅಕ್ಕಿಯನ್ನು ಹಾಗೂ ಹೆಚ್ಚಿದ ತರಕಾರಿ, ರುಚಿಗೆ ತಕ್ಕಶ್ಟು ಉಪ್ಪು, ಒಂದು ಪಾವಿಗೆ ಒಂದು ಕಾಲು ಕಪ್ ನೀರು ಹಾಕಿ 2 ಚಮಚ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಕ್ಕರನ್ನು 2 ಸಲ ಕೂಗಿಸಿ. ಸ್ವಲ್ಪ ಆರಿದ ನಂತರ ಸೌಟಿನಿಂದ ಮಿಕ್ಸ್ ಮಾಡಿ ತಿನ್ನಲು ನೀಡಿ.

ಪಲಾವನ್ನು ಹಾಗೆಯೇ ತಿನ್ನಲು ಕೊಡಬಹುದು ಅತವಾ ಮೊಸರು ಬಜ್ಜಿ ಜೊತೆಗೆ ಸವಿಯಲು ನೀಡಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: