ಕವಿತೆ: ನೀನೆಂದರೆ

– ವಿನು ರವಿ.

ಒಲವು, ಪ್ರೀತಿ, Love

ನೀನೆಂದರೆ ಅನುರಾಗವಲ್ಲ
ಎದೆ ತುಂಬಾ ಆರಾದನೆ

ನೀನೆಂದರೆ ಕಾಮನೆಯಲ್ಲ
ಕಣ್ಣು ತುಂಬಾ ಅಬಿಮಾನ

ನೀನೆಂದರೆ ಬೇಡಿಕೆಯಲ್ಲ
ಮೌನದಿ ಮಾಡುವ ಪ್ರಾರ‍್ತನೆ

ನೀನೆಂದರೆ ಬಾವುಕತೆಯಲ್ಲ
ಮಾತಿಗೆ ನಿಲುಕದ ಮದುರಾನುಬೂತಿ

ನೀನೆಂದರೆ ಉಲ್ಲಾಸವಲ್ಲ
ಮೈಮನದೊಳಗೆಲ್ಲಾ ಹುರುಪು

ನಿನ್ನಾ ಮೈತ್ರಿಗೆ ವಿರಾಮವಿಲ್ಲ
ಈ ಅನುಬಂದಕೆ ಕೊನೆಯಿಲ್ಲ

ನಿನ್ನಾ ಕಾಣುವ ಆತುರವಿಲ್ಲ
ನಿನ್ನಾ ಸೇರುವ ಬಯಕೆಯಿಲ್ಲ

ಅನುದಿನ ಅನುಕ್ಶಣ ನಿನ್ನದೆ ದ್ಯಾನ
ಮರೆತ ದಿನ ಕಳೆದುಕೊಂಡಂತೆ ನನ್ನತನ

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. B V Maheedasa says:

    ಅದ್ಭುತ ಕವಿತೆ. ಪಕ್ವಗೊಂಡ ಪ್ರೀತಿಯ ಅಭಿವ್ಯಕ್ತಿ. ಮುದಗೊಳಿಸುವ ಅನುಭವ ನೀಡುವ ಓದು.

ಅನಿಸಿಕೆ ಬರೆಯಿರಿ: