ಬ್ರೆಡ್ ಪಕೋಡಾ
– ಸವಿತಾ.
ಬೇಕಾಗುವ ಸಾಮಾನುಗಳು
- ಕಡಲೇ ಹಿಟ್ಟು – 2 ಬಟ್ಟಲು
- ಹಸಿ ಮೆಣಸಿನಕಾಯಿ – 4
- ಹಸಿ ಶುಂಟಿ – 1/4 ಇಂಚು
- ಜೀರಿಗೆ – 1/4 ಚಮಚ
- ಅಜೀವಾಯಿನ್ ( ಓಂ ಕಾಳು) – 1/4 ಚಮಚ
- ಕೊತ್ತಂಬರಿ ಕಾಳು – 1/4 ಚಮಚ
- ಕೊತ್ತಂಬರಿ ಸೊಪ್ಪು – 4 ಕಡ್ಡಿ
- ಗರಮ್ ಮಸಾಲೆ – 1/4 ಚಮಚ
- ಕಾದ ಎಣ್ಣೆ – 1 ಚಮಚ
- ಅಡುಗೆ ಸೋಡಾ – 1/4 ಚಮಚ
- ಬ್ರೆಡ್ – 4
- ಉಪ್ಪು – ರುಚಿಗೆ ತಕ್ಕಶ್ಟು
- ಕರಿಯಲು ಎಣ್ಣೆ
ಮಾಡುವ ಬಗೆ
ಹಸಿ ಮೆಣಸಿನಕಾಯಿ, ಹಸಿ ಶುಂಟಿ, ಜೀರಿಗೆ, ಓಂ ಕಾಳು, ಕೊತ್ತಂಬರಿ ಕಾಳು, ಅರ‍್ದ ಚಮಚ ಉಪ್ಪು ಸೇರಿಸಿ, ಕಲ್ಲಿನಲ್ಲಿ ಅರೆದು ಕಡಲೇ ಹಿಟ್ಟಿಗೆ ಹಾಕಿ. ಸ್ವಲ್ಪ ನೀರು ಹಾಕಿ ಗರಮ್ ಮಸಾಲೆ ಪುಡಿ ಮತ್ತು ಅಡುಗೆ ಸೋಡಾ ಸೇರಿಸಿ ಕಲಸಿ ಇಟ್ಟುಕೊಳ್ಳಿ. ಕೊತ್ತಂಬರಿ ಸೊಪ್ಪು ಕತ್ತರಿಸಿಟ್ಟುಕೊಳ್ಳಿ.
ಬ್ರೆಡ್ ನಲ್ಲಿ ತ್ರಿಕೋನ ಆಕಾರ ಬರುವಂತೆ ನಡುವೆ ಕತ್ತರಿಸಿ ಇಟ್ಟುಕೊಳ್ಳಿ. ಇದೇ ರೀತಿ ನಾಲ್ಕು ಬ್ರೆಡ್ ಅನ್ನು ಕತ್ತರಿಸಿ ಇಟ್ಟುಕೊಳ್ಳಿ. ಎಣ್ಣೆ ಕಾಯಲು ಇಟ್ಟು, ಒಂದು ಚಮಚ ಕಾದ ಎಣ್ಣೆ, ಕಡಲೇ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. ನಂತರ ಬ್ರೆಡ್ ತುಂಡು ಅದ್ದಿ ಕಾದ ಎಣ್ಣೆ ಯಲ್ಲಿ ಒಂದೊಂದೇ ಬಿಟ್ಟು ಎರಡೂ ಬದಿ ಹೊರಳಾಡಿಸಿ ಕರಿದು ತೆಗೆಯಿರಿ. ಈಗ ಬ್ರೆಡ್ ಪಕೋಡಾ ಸವಿಯಲು ತಯಾರು.
ಇತ್ತೀಚಿನ ಅನಿಸಿಕೆಗಳು