ಕವಿತೆ : ಒಲವ ಸಕಿ

.

ಒಲವು, ಪ್ರೀತಿ, Love

ಒಲವ ಬಾವದಿ ಕರವ ಪ್ರೇಮದಲಿ
ಹಿಡಿದೆಯಲ್ಲ ಸಕಿ
ಚೆಲುವ ಸುಂದರ ಸ್ವಪ್ನದ ಲೋಕದಲಿ
ತೇಲಿಸಿದೆಯಲ್ಲ ಸಕಿ

ತುಳಿದು ಸಪ್ತಪದಿಯ ಏಳು ಹೆಜ್ಜೆಯನು
ಇಡುವೆ ಜೊತೆಯಲಿ
ಸೆಳೆದು ಹ್ರುದಯವ ತೋಶದಿ ನಲ್ಲನ
ಗೆಲಿದೆಯಲ್ಲ ಸಕಿ

ಎಡರು ತೊಡರು ಸರಿಸಿ ಪ್ರೀತಿಗೆ
ಜಯವನು ತಂದಿರುವೆ
ಕಡಲು ನದಿಯ ಸೇರುವ ಹಾಗೆಯೆ
ಕೂಡಿದೆಯಲ್ಲ ಸಕಿ

ಮೂರು ಗಂಟಿನ ಮಾಂಗಲ್ಯ ಬಾಗ್ಯದಿ
ಅಗ್ನಿಸಾಕ್ಶಿಯಾಗಿ ಬಂದಿಸಿದೆ
ತಾರೆಯ ನಗುವಂತೆ ಗಗನದಿ ಅಹರ‍್ನಿಶಿ
ಹೊಳೆದೆಯಲ್ಲ ಸಕಿ

ಅರಳಿ ನಿಂತಿಹ ಪುಶ್ಪದಂತೆ ಇನಿಯನ
ಬಾಳಿಗೆ ಜೋಡಿಯಾದೆ
ಸುರರ ರಮಣಿ ಅಬಿನವನ ಬಾವವನು
ತಿಳಿದೆಯಲ್ಲ ಸಕಿ

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: