ಮಕ್ಕಳ ಕವನ : ನಂದನವನ ನಮ್ಮ ಶಾಲೆ

ವೆಂಕಟೇಶ ಚಾಗಿ

ಸರಕಾರಿ ಸ್ಕೂಲು, Govt School

ನಮ್ಮ ಶಾಲೆ ನಮಗೆ ಹೆಮ್ಮೆ
ಶಾಲೆಯು ನಮಗೆ ನಂದನವು
ಶಾಂತಿ ಸ್ನೇಹ ಸೋದರಬಾವ
ಶಾಲೆಯು ನಮಗೆ ಮಂದಿರವು

ಗುರುಗಳು ಹೇಳುವ ಮಾತೆ ನಮಗೆ
ದೇವರು ನೀಡಿದ ಅಮ್ರುತವು
ನಲಿಯುತ ಕಲಿಯುವ ಪಾಟ ನಮಗೆ
ಮುಂದಿನ ಬದುಕಿನ ಬುನಾದಿಯು

ಕನ್ನಡ ನುಡಿಯ ಚಂದದ ನುಡಿಯ
ನುಡಿಯುವ ನಾವೇ ದನ್ಯರು
ಗುರುಗಳು ಹೇಳುವ ಮಾತಿನಂತೆ
ಜಗಕೆ ನಾವೇ ಮಾನ್ಯರು

ಲೆಕ್ಕವೇ ಇರಲಿ ಬಾಶೆಯೆ ಇರಲಿ
ಸಲೀಸು ನಮಗೆ ಕಲಿಯಲು
ಸರಸರ ಬರೆದು ತಪ್ಪದೇ ಓದಲು
ಕುಶಿಯು ಆಟವನಾಡಲು

ಶಾಲೆಯ ಸುಂದರ ಹೂಗಳು ನಾವು
ಶಾಲೆಗೆ ಕೀರ‍್ತಿಯ ತರುವೆವು
ದೇಶ ಬಕ್ತಿಯ ನೆಲದ ಶಕ್ತಿಯ
ಲೋಕಕೆ ನಾವು ಸಾರುವೆವು

(ಚಿತ್ರ ಸೆಲೆ:  klp )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Raghuramu N.V. says:

    ಚೆನ್ನಾಗಿದೆ ಸರ್

ಅನಿಸಿಕೆ ಬರೆಯಿರಿ:

Enable Notifications OK No thanks