ಹುರುಳಿ ಚಹಾ

– ಸವಿತಾ.

 

ಹುರುಳಿ ಚಹಾ, tea

ಬೇಕಾಗುವ ಸಾಮಾನುಗಳು

  • ಹುರುಳಿ ಕಾಳು – 1 ಚಮಚ
  • ಏಲಕ್ಕಿ – 1
  • ಕರಿ ಮೆಣಸಿನ ಕಾಳು – 2
  • ಬೆಲ್ಲದ ಪುಡಿ – 1ಚಮಚ
  • ನೀರು – 3 ಕಪ್

ಮಾಡುವ ಬಗೆ

ಹುರುಳಿ ಕಾಳು ಹುರಿದು ಪುಡಿ ಮಾಡಿ ಇಟ್ಟುಕೊಳ್ಳಿ. ನೀರು ಕುದಿಯಲು ಇಟ್ಟು, ಹುರುಳಿ ಕಾಳು ಪುಡಿ ಹಾಕಿ. ಏಲಕ್ಕಿ, ಕರಿ ಮೆಣಸಿನ ಕಾಳು ಪುಡಿ ಮಾಡಿ ಹಾಕಿ. ಒಂದು ಚಮಚ ಬೆಲ್ಲ ಹಾಕಿ ಕುದಿಸಿ ಇಳಿಸಿ.

ಬಿಸಿ ಬಿಸಿ ಹುರುಳಿ ಚಹಾ ಸಿದ್ದ. ಮಳೆಯಾದಾಗ ಆರೋಗ್ಯಕರ ಬಿಸಿ ಬಿಸಿ ಹುರುಳಿ ಚಹಾ ಸವಿಯಲು ಚೆನ್ನಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: