ಕವಿತೆ: ಕಳಚಬೇಕು ಆಸೆಯ ಪದರ

– ವಿನು ರವಿ.

ಅರಿವು, ದ್ಯಾನ, Enlightenment

ಅದಶ್ಟು ಸುಲಬವಾಗಿತ್ತೆ
ಎಲ್ಲವನು ತೊರೆದು
ನಡೆದು ಹೋದದ್ದು

ಅರಮನೆಯ ಬದುಕು
ಮೊಗೆ ಮೊಗೆದು ಕೊಟ್ಟಿರಲಿಲ್ಲವೆ
ಪ್ರೀತಿ ಸಂತ್ರುಪ್ತಿ

ಅಂತಪುರದಾಚೆಗಿನ
ಅದಾವ ನೋವು ಸಾವು
ಅಂತರಂಗದ ಕದವ ತೆರೆದು ಹೋಯಿತು

ಅದಮ್ಯವಾಗಿ ಕಾಡಿದ ಚಿಂತೆ
ಕಾಡು ಮೇಡು ಅಲೆಯುವಂತೆ ಮಾಡಿತೆ
ಅಲ್ಲಿ ಇಲ್ಲಿ ಎಲ್ಲೆಲ್ಲೊ ಹುಡುಕಿ

ಅಂತೂ ಅಂತರಂಗದೊಳಗೆ
ಒಂದು ದಿನ ಹುಟ್ಟಿತೆ ಉತ್ತರ
ಪರಮ ಸಾಕ್ಶಾತ್ಕಾರ

ಬದುಕಾಗಲು ಸರಳ ಸುಂದರ
ಕಳಚಬೇಕು ಆಸೆಯ ಪದರ

(ಚಿತ್ರ ಸೆಲೆ: mindfulmuscle.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: